• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಮಕರ ರಾಶಿ ಭವಿಷ್ಯ 2021 - Capricorn Horoscope 2021 in Kannada

Author: -- | Last Updated: Tue 28 Apr 2020 12:10:25 PM

makara rashi bhavishya 2021, makara jaataka 2021, makara rashiphala 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಮಕರ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ಅನೇಕ ವಿಷಯಗಳಲ್ಲಿ ಉತ್ತಮವಾಗಿರಲಿದೆ ಏಕೆಂದರೆ ನಿಮ್ಮದೇ ರಾಶಿಚಕ್ರದ ಅಧಿಪತಿ ಶನಿ ನಿಮ್ಮದೇ ರಾಶಿಚಕ್ರದಲ್ಲಿ ಕುಳಿತುಕೊಳ್ಳುತ್ತಾರೆ. ಇದರ ಪರಿಣಾಮದಿಂದಾಗಿ ನಿಮ್ಮ ಜೀವನದ ವಿವಿಧ ಕ್ಷೇತ್ರಗಳು ಪ್ರಭಾವಿತವಾಗುತ್ತವೆ. ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ವರ್ಷ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ. ನೀವು ಎಷ್ಟು ಪರಿಶ್ರಮಿಸುತ್ತಿರೋ ಶನಿ ದೇವರು ಅದರ ಉತ್ತಮ ಫಲಿತಾಂಶಗಳನ್ನು ನಿಮಗೆ ನೀಡಲಿದ್ದಾರೆ. ನಿಮ್ಮ ಹಿಂದಿನ ಯಾವುದೇ ಕೆಲಸವು ಸಿಲುಕಿಕೊಂಡಿದ್ದರೆ, ಅದಕ್ಕೆ ಸಂಬಂಧಿಸಿದ ಫಲಿತಾಂಶವನ್ನು ಸಹ ನೀವು ಈ ವರ್ಷ ಪಡೆಯುತ್ತೀರಿ. ವ್ಯಾಪಾರಕ್ಕೆ ಸಂಬಂಧಿಸಿದ ಸ್ಥಳೀಯರನ್ನು ಅದೃಷ್ಟವು ಬೆಂಬಲಿಸುತ್ತದೆ ಮತ್ತು ಅವರ ಪ್ರಗತಿಯಾಗುತ್ತದೆ. ಆರ್ಥಿಕ ಜೀವನಕ್ಕೆ ಈ ವರ್ಷವು ಸ್ವಲ್ಪ ದುರ್ಬಲವಾಗಿರುತ್ತದೆ. ಏಕೆಂದರೆ ವರ್ಷದ ಆರಂಭದಲ್ಲಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವರ್ಷದ ಅಂತ್ಯದಲ್ಲಿ ನಿಮಗೆ ಹಣಕಾಸಿನ ಲಾಭವಾಗುವ ಸಂಪೂರ್ಣ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಈ ಇಡೀ ವರ್ಷ ನೀವು ನಿಮ್ಮ ಹಣವನ್ನು ಸರಿಯಾಗಿ ಬಳಸಬೇಕು ಮತ್ತು ಹಣವನ್ನು ಉಳಿಸಲು ಪ್ರಯತ್ನಿಸಬೇಕು.

ಜಾತಕ ಆಧಾರಿತ ನಿಖರವಾದ ಮುನುಸೂಚನೆಯನ್ನು ಪಡೆಯಿರಿ: ಆಸ್ಟ್ರೋಸೇಜ್ ಮಹಾ ಕುಂಡಲಿ

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಈ ರಾಶಿಚಕ್ರದ ವಿದ್ಯಾರ್ಥಿಗಳು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಏಕೆಂದರೆ ಒಂದೆಡೆ ರಾಹು ಅಧ್ಯಯನದಲ್ಲಿ ನಿಮಗೆ ಉತ್ತಮ ಫಲಿತಾಂಶವನ್ನು ನೀಡಿದರೆ, ಅದೇ ಸಮಯದಲ್ಲಿ ಮತ್ತೊಂದೆಡೆ, ರಾಹುವು ಈ ಮಧ್ಯೆ ನಿಮ್ಮ ಪರೀಕ್ಷೆ ತೆಗೆದುಕೊಳ್ಳುತ್ತಾ, ನಿಮ್ಮ ಮನಸ್ಸನ್ನು ಗೊಂದಲಗೊಳಿಸುವ ಕೆಲಸವನ್ನು ಸಹ ಮಾಡುವಂತೆ ಕಂಡುಬರುತ್ತಾನೆ. ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಮಾತ್ರ ಗಮನ ಹರಿಸುವ ಅಗತ್ಯವಿದೆ. ಕುಟುಂಬ ಜೀವನದಲ್ಲಿ ನೀವು ನಿಮ್ಮ ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ. ಆದಾಗ್ಯೂ ಆರಂಭದಲ್ಲಿ ಕುಟುಂಬದ ಬಗ್ಗೆ ಯಾವುದೇ ಸಮಸ್ಯೆಗಳು ಉಂಟಾಗಬಹುದು ಆದರೆ ಏಪ್ರಿಲ್ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ ಮತ್ತು ನಿಮ್ಮ ಎಲ್ಲಾ ಸಹಾಯಕ್ಕಾಗಿ ಕುಟುಂಬದ ಹಿರಿಯ ಸದಸ್ಯರು ನಿಮ್ಮೊಂದಿಗೆ ನಿಲ್ಲುತ್ತಾರೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ವೈವಾಹಿಕ ಸ್ಥಳೀಯರಿಗೆ ಈ ವರ್ಷ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಏಕೆಂದರೆ ವರ್ಷದ ಆರಂಭದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಪ್ರೀತಿಯ ಹೆಚ್ಚಳವಾಗುತ್ತದೆ ಮತ್ತು ನೀವು ನಿಮ್ಮ ಜೀವನ ಸಂಗಾತಿಯ ಸಹಾಯವನ್ನು ಪಡೆಯುತ್ತೀರಿ. ಇದರಿಂದ ನೀವು ಅನೇಕ ಸವಾಲುಗಳನ್ನು ಉತ್ತಮವಾಗಿ ಎದುರಿಸಲು ಸಾಧ್ಯವಾಗುತ್ತದೆ. ದಾಂಪತ್ಯ ಜೀವನದಲ್ಲಿಯೂ ಸಹ ಮಕ್ಕಳ ಬದಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ ಮತ್ತು ಅವರು ಪ್ರಗತಿ ಪಡೆಯುತ್ತಾರೆ. ಪ್ರೀತಿ ಸಂಬಂಧಗಳ ಬಗ್ಗೆ ಮಾತನಾಡಿದರೆ, ಫಲಿತಾಂಶಗಳು ನಿಮಗೆ ಅನುಕೂಲಕರವಾಗಿರುತ್ತವೆ ಮತ್ತು ಪ್ರಿಯಕರನೊಂದಿಗೆ ನಿಮ್ಮ ಪ್ರೀತಿಯಿಲ್ಲಿ ಸಿಹಿ ಹೆಚ್ಚಾಗುತ್ತದೆ. ಆದಾಗ್ಯೂ ಮಾರ್ಚ್ ಮತ್ತು ಜೂಲೈ ರಿಂದ ಆಗಸ್ಟ್ ವರೆಗಿನ ಸಮಯದಲ್ಲಿ ಕೆಲವು ವಿವಾದಗಳು ಉಂಟಾಗಬಹುದು. ಆದ್ದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ವಿವಾದವನ್ನು ಹೆಚ್ಚಿಸದೆ ಅದನ್ನು ಸಂಗಾತಿಯ ಸಹಾಯದಿಂದ ಸಮಯವಿರುವಾಗಲೇ ಪರಿಹರಿಸಲು ಪ್ರಯತ್ನಿಸಿ. ಇಲ್ಲವಾದರೆ ಮೂರನೇ ವ್ಯಕ್ತಿಯು ಅದರ ಲಾಭ ಪಡೆದುಕೊಳ್ಳಬಹುದು. ಇದರೊಂದಿಗೆ ಅರೋಗ್ಯ ಜೀವನಕ್ಕಾಗಿ ಈ ವರ್ಷ ಬಹಳ ಉತ್ತಮವಾಗಿರಲಿದೆ. ಈ ಸಮಯದಲ್ಲಿ ಖಂಡಿತವಾಗಿಯೂ ಕೆಲವು ಒತ್ತಡಗಳಿರಬಹುದು ಆದರೆ ಇದರ ಹೊರೆತಾಗಿಯೂ ನಿಮಗೆ ಯಾವುದೇ ದೊಡ್ಡ ಕಾಯಿಲೆಯಾಗುವುದಿಲ್ಲ. ಇದರೊಂದಿಗೆ ಯಾವುದೇ ದೀರ್ಘಕಾಲದ ರೋಗವನ್ನು ಸಹ ಈ ಸಮಯದಲ್ಲಿ ತೊಡೆದುಹಾಕಲು ಸಾಧ್ಯವಾಗುತ್ತದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ವೃತ್ತಿ ಜೀವನ - Career life according Capricorn future 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಈ ವರ್ಷದಲ್ಲಿ ನಿಮ್ಮ ರಾಶಿಯ ಅಧಿಪತಿ ಶನಿ ದೇವರು ನಿಮ್ಮದೇ ರಾಶಿಚಕ್ರದಲ್ಲಿ ಇರುತ್ತಾರೆ. ಇದು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಶನಿ ದೇವರೊಂದಿಗೆ ಗುರುವು ಸಹ ನಿಮ್ಮದೇ ರಾಶಿಚಕ್ರದಲ್ಲಿ ಕುಳಿತುಕೊಳ್ಳಲಿದ್ದಾರೆ. ಅಲ್ಲಿಂದ ಶನಿ ದೇವರು ನಿಮ್ಮ ಕರ್ಮದ ಮನೆಯ ಮೇಲೆ ದೃಷ್ಟಿ ನೀಡಲಿದ್ದಾರೆ. ಇದರಿಂದ ನೀವು ನಿಮ್ಮ ಪರಿಶ್ರಮದ ಸಾಧ್ಯವಾದಷ್ಟು ಫಲಿತಾಂಶಗಳನ್ನು ಪಡೆಯುತ್ತೀರಿ

ಶನಿ ಮತ್ತು ಗುರುವಿನ ಈ ಸ್ಥಾನದಿಂದ ಈ ಸಮಯದಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ಅನೇಕ ಎತ್ತರಗಳನ್ನು ಸಾಧಿಸುತ್ತೀರಿ.

ವಿಶೇಷವಾಗಿ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದಲ್ಲಿ ಹೆಚ್ಚು ಪರಿಶ್ರಮಿಸಬೇಕು ಆಗ ಮಾತ್ರ ಫಲಿತಾಂಶಗಳು ಮುಂಬರುತ್ತವೆ. ಆದ್ದರಿಂದ ನೀವು ನಿಮ್ಮ ಕೆಲಸದ ಬಗ್ಗೆ ಮಾತ್ರ ಗಮನ ಹರಿಸುವುದು ನಿಮಗೆ ಉತ್ತಮ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಜನವರಿ ತಿಂಗಳಲ್ಲಿ ನೀವು ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಯಾವದೇ ದೂರಸ್ಥ ಪ್ರವಾಸಕ್ಕೆ ಹೋಗಬೇಕಾಗುವ ಸಾಧ್ಯತೆ ಇದೆ. ನೀವು ಬಯಸಿದರೆ ಇದರಿಂದ ನೀವು ಲಾಭವನ್ನು ಪಡೆಯಬಹುದು.

ಇದರೊಂದಿಗೆ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ. ವಿಶೇಷವಾಗಿ ಯಾವುದೇ ರೀತಿಯ ಕಾನೂನುಬಾಹಿರ ಕೃತಿಗಳಿಂದ ನಿಮ್ಮನ್ನು ದೂರವಿರಿಸಿ ಇಲ್ಲದಿದ್ದರೆ ಅದರ ಕೆಟ್ಟ ಪರಿಣಾಮವು ನಿಮ್ಮ ಕೆಲಸದ ಮೇಲೆ ಬೀರಬಹುದು.

ನೀವು ತೆರಿಗೆ ವಂಚನೆ ಮಾಡಿದರೆ, ನೀವು ಗಮನ ಹರಿಸುವ ಅಗತ್ಯವಿದೆ. ಇದಕ್ಕಾಗಿ ತೆರಿಗೆ ವಂಚನೆಯನ್ನು ತಪ್ಪಿಸಲು ಪ್ರಯತ್ನಿಸಿ.

ವ್ಯಾಪಾರಸ್ಥರಿಗೆ ಸಮಯವೂ ಅತ್ಯಂತ ಶುಭವಾಗಿರುತ್ತದೆ ಏಕೆಂದರೆ ಅವರು ತಮ್ಮ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಉದ್ಯಮಿಗಳಿಗೆ ವಿಶೇಷವಾಗಿ ವರ್ಷದ ದ್ವಿತೀಯಾರ್ಧವು ಹೆಚ್ಚು ಉಪಯುಕ್ತ ಮತ್ತು ಪ್ರಯೋಜನಕಾರಿಯಾಗಲಿದೆ.

ಒಟ್ಟಾರೆಯಾಗಿ ನೋಡಿದರೆ, ಈ ವರ್ಷ ನಿಮ್ಮ ವೃತ್ತಿ ಜೀವನವು ನಿರಂತರವಾಗಿ ಮುಂದುವರಿಯುತ್ತದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಆರ್ಥಿಕ ಜೀವನ - Financial life according Capricorn future 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಆರ್ಥಿಕ ಜೀವನದಲ್ಲಿ ವರ್ಷ 2021 ಕೆಲವು ಸಮಸ್ಯೆಗಳಿಂದ ತುಂಬಿರುತ್ತದೆ ಎಂದು ಸಾಬೀತುಪಡಿಸಬಹುದು. ವಿಶೇಷವಾಗಿ ಕೆಲವು ವೆಚ್ಚಗಳಿಂದ ವರ್ಷದ ಆರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟು ನೀವು ನಿಮ್ಮ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ.

ಗ್ರಹಗಳ ಸ್ಥಾನವು ಶುಭವಾಗಿರುವ ಕಾರಣದಿಂದಾಗಿ, ಜನವರಿ, ಮೇ ಮಾತು ಆಗಸ್ಟ್ ತಿಂಗಳಲ್ಲಿ ನಿಮ್ಮ ವೆಚ್ಚಗಳು ಸಾಕಷ್ಟು ಹೆಚ್ಚಾಗುತ್ತವೆ. ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಅದರ ಬಗ್ಗೆ ಗಮನ ಹರಿಸುವ ಅಗತ್ಯವಿದೆ.

ಆದಾಗ್ಯೂ ಇದರ ನಂತರ ಪರಿಸ್ಥಿತಿಯಲ್ಲಿ ಕ್ರಮೇಣ ಸುಧಾರಣೆಯನ್ನು ನೋಡಲಾಗುತ್ತದೆ ಏಕೆಂದರೆ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು ನಿಮಗಾಗಿ ಹಣ ಗಳಿಸುವ ಅನೇಕ ಹಾದಿಗಳನ್ನು ತೆರೆಯುವ ಕೆಲಸ ಮಾಡುತ್ತದೆ. ಇದರಿಂದ ನೀವು ಹಣಕಾಸಿನ ಲಾಭವನ್ನು ಪಡೆಯುತ್ತೀರಿ ಮತ್ತು ಹಣಕಾಸು ಸಂಗ್ರಹಿಸಲು ಸಹ ಸಾಧ್ಯವಾಗುತ್ತದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, 6 ಏಪ್ರಿಲ್ ರಿಂದ 15 ಸೆಪ್ಟೆಂಬರ್ ಮಧ್ಯೆ ಮತ್ತು ಅದರ ನಂತರ 20 ನವೆಂಬರ್ ರಿಂದ ವರ್ಷಪೂರ್ತಿ ನೀವು ಅನೇಕ ಮೂಲಗಳಿಂದ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ಗುರುವಿನ ಸಾಗುವಿಕೆಯು ನಿಮ್ಮ ರಾಶಿಚಕ್ರದ ಎರಡನೇ ಮನೆಯಲ್ಲಿರುತ್ತದೆ. ಇದರಿಂದ ನಿಮ್ಮ ಎಲ್ಲಾ ರೀತಿಯ ಆರ್ಥಿಕ ಬಿಕ್ಕಟ್ಟುಗಳು ದೂರವಾಗುತ್ತವೆ.

ಇದರೊಂದಿಗೆ ವರ್ಷದ ಅಂತ್ಯ ಅಂದರೆ ಡಿಸೆಂಬರ್ ತಿಂಗಳಲ್ಲಿ ನಿಮಗೆ ವಿಶೇಷ ಲಾಭವಾಗುವ ಸಾಧ್ಯತೆ ಇದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಶಿಕ್ಷಣ - Education life according Capricorn future 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಮಕರ ರಾಶಿಚಕ್ರದ ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ವರ್ಷ 2021 ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ. ಏಕೆಂದರೆ ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿರುವ ರಾಹು ಗ್ರಹವು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.

ರಾಹುವಿನ ಅನುಗ್ರಹದಿಂದ ಈ ಸಮಯದಲ್ಲಿ ನೀವು ನಿಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ, ಇದರೊಂದಿಗೆ ಪ್ರಾತಿಯೊಂದು ಕಷ್ಟಕರ ಸವಾಲುಗಳನ್ನು ಸಹ ಸುಲಭವಾಗಿ ಪರಿಹರಿಸಲು ಸಾಧ್ಯವಾಗುತದೆ. ಸಮಯ ಇರುವಾಗಲೇ ನೀವು ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.

ಆದಾಗ್ಯೂ ಈ ಮಧ್ಯೆ ರಾಹು ಗ್ರಹವು ನಿಮ್ಮ ಮನಸ್ಸನ್ನು ಅಲೆದಾಡಿಸುವ ಕೆಲಸ ಸಹ ಮಾಡುತ್ತದೆ. ವಿಶೇಷವಾಗಿ ಜನವರಿ ಮತ್ತು ಮೇ ತಿಂಗಳು ಈ ವರ್ಷ ನಿಮಗೆ ಅತ್ಯಂತ ಪ್ರಮುಖವೆಂದು ಸವೀತುಪಡಿಸಲಿವೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಏಕಾಗ್ರತೆ ಭಂಗವಾಗಬಹುದು ಮತ್ತು ವ್ಯರ್ಥವಾದ ಕೆಲಸಗಳಲ್ಲಿ ನಿಮ್ಮ ಸಮಯ ಹಾಳಾಗುವುದರಿಂದಾಗಿ ಅಧ್ಯಯನದಲ್ಲಿ ಅಡಚಣೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ವಿದೇಶದಲ್ಲಿ ಅಧ್ಯಯನದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಜನವರಿ - ಫೆಬ್ರವರಿ ಮತ್ತು ಆಗಸ್ಟ್ - ಡಿಸೆಂಬರ್ ತಿಂಗಳಲ್ಲಿ ವಿದೇಶಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಾಧ್ಯತೆ ಇದೆ.

ಇದಲ್ಲದೆ ಉನ್ನತ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಯಶಸ್ವಿಯಾಗಲು ವರ್ಷದ ಆರಂಭದಲ್ಲಿ ಹೆಚ್ಚು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಅದರ ನಂತರ ಏಪ್ರಿಲ್ ವರೆಗಿನ ಸಮಯ ಮತ್ತು ನಂತರ ಸೆಪ್ಟೆಂಬರ್ ರಿಂದ ನವೆಂಬರ್ ವರೆಗಿನ ಸಮಯವೂ ನಿಮಗಾಗಿ ಬಹಳಷ್ಟು ಉತ್ತಮವಾಗಿರಲಿದೆ.

ಉನ್ನತ ಶಿಕ್ಷಣದಲ್ಲಿ ಯಶಸ್ಸು ಪಡೆಯಲು ನೀವು ಬಲವಾದ ಸಾಧ್ಯತೆಯನ್ನು ಹೊಂದಿರುವ ಸಮಯ ಇದು. ಅಂತಹ ಪರಿಸ್ಥಿತಿಯಲ್ಲಿ, ಈ ಸಮಯದ ಗರಿಷ್ಟ ಲಾಭವನ್ನು ಪಡೆಯುವುದು ನಿಮಗೆ ಅತ್ಯಂತ ಅಗತ್ಯವಾಗಿರುತ್ತದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಕೌಟುಂಬಿಕ ಜೀವನ - Family life according Capricorn future 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಈ ರಾಶಿಚಕ್ರದ ಸ್ಥಳೀಯರ ಕೌಟುಂಬಿಕ ಜೀವನವು ಈ ವರ್ಷ ಸಾಮಾನ್ಯಕ್ಕಿಂತ ಸ್ವಲ್ಪ ಉತ್ತಮವಾಗಿರಲಿದೆ. ಏಕೆಂದರೆ ವರ್ಷದ ಆರಂಭದಲ್ಲಿ ಮಂಗಳ ದೇವ ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿರುತ್ತಾರೆ, ಈ ಕಾರಣದಿಂದಾಗಿ ನಿಮ್ಮ ತಾಯಿಯು ಕಷ್ಟಗಳಿಂದ ಬಳಲಬಹುದು.

ಅಂತಹ ಸಂದರ್ಭದಲ್ಲಿ ಅವರ ಬಗ್ಗೆ ಕಾಳಜಿ ವಹಿಸಿ ಮತ್ತು ಅವರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ ಇಲ್ಲದಿದ್ದರೆ ಅವರಿಗೆ ಅರೋಗ್ಯ ಸಂಬಂಧಿತ ಸಮಸ್ಯೆಗಳಾಗಬಹುದು. ಸಮಯ ಇರುವಾಗಲೇ ಅದರಲ್ಲಿ ಏನಾದರೂ ಕೊರತೆಯಾದರೆ, ನಿಮಗೆ ಹಣಕಾಸಿನ ನಷ್ಟವಾಗಬಹುದು.

ಈ ಸಮಯದಲ್ಲಿ ನಿಮ್ಮ ಕೌಟುಂಬಿಕ ಜೀವನದಲ್ಲಿ ಅಪಶ್ರುತಿಯ ಪರಿಸ್ಥಿಗಳು ಉಂಟಾಗುತ್ತಿರುತ್ತವೆ ಆದರೆ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳೂ ಇರುತ್ತವೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ನೀವು ನಿಮ್ಮ ಕುಟುಂಬ ಜೀವನದಲ್ಲಿ ಚಲಿಸಬಲ್ಲ ಮತ್ತು ಸ್ಥಿತರವಾದ ಆಸ್ತಿಯನ್ನು ಪಡೆಯುತ್ತೀರಿ, ಇದರಿಂದ ಕುಟುಂಬದಲ್ಲಿ ಸಂತೋಷ ಬರುತ್ತದೆ

ವಿಶೇಷವಾಗಿ ಮಾರ್ಚ್ ರಿಂದ ಪರಿಸ್ಥಿತಿಗಳು ನಿಮ್ಮ ಕುಟುಂಬಕ್ಕೆ ಅನುಕೂಲಕರವಾಗಿರುತ್ತವೆ. ಇದರಿಂದ ಮನೆಯ ಸದಸ್ಯರ ನಡುವೆ ಪ್ರೀತಿಯ ಭಾವನೆ ಹೆಚ್ಚಾಗುತ್ತದೆ ಮತ್ತು ಆ ಪ್ರೀತಿಯನ್ನು ನೋಡಿ ನೀವು ಸಹ ಆನಂದವನ್ನು ಪಡೆಯುತ್ತೀರಿ.

ಇದರ ನಂತರ ಏಪ್ರಿಲ್ ತಿಂಗಳಲ್ಲಿ ಗುರುವು ಕುಂಭ ರಾಶಿಚಕ್ರದಲ್ಲಿ ಕುಳಿತುಕೊಂಡಾಗ, ಇದು ನಿಮ್ಮ ಕುಟುಂಬ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೀವು ಕುಟುಂಬದ ಬೆಂಬಲವನ್ನು ಪಡೆಯುತ್ತೀರಿ ಮತ್ತು ಕುಟುಂಬದಲ್ಲಿ ಸಂತೋಷ ಬರುತ್ತದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಮನೆ-ಕುಟುಂಬದಲ್ಲಿ ಕೆಲವು ಹೊಸ ಕೆಲಸಗಳು ಮತ್ತು ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಹೊಸ ಹೊಸ ಭಕ್ಷ್ಯಗಳನ್ನು ತಿನ್ನಲು ನಿಮಗೆ ಅವಕಾಶ ಪಡೆಯುತ್ತೀರಿ. ಈ ವರ್ಷ ಕುಟುಂಬದಲ್ಲಿ ಯಾವುದೇ ಮಗು ಜನಿಸಬಹುದು ಅಥವಾ ಯಾವುದೇ ಸದಸ್ಯರ ಮದುವೆಯಾಗುವ ಸಾಧ್ಯತೆಯೂ ಇದೆ. ಇದರಿಂದ ಕುಟುಂಬದ ಪರಿಸರವು ಆಹ್ಲಾದಕರವಾಗಿರುತ್ತದೆ.

ಆದಾಗ್ಯೂ ಈ ಸಮಯದಲ್ಲಿ ಅತಿಥಿಗಳ ಆಗಮನದ ಸಾಧ್ಯತೆಯೂ ಇದೆ ಆದರೆ ನಿಮ್ಮ ವೆಚ್ಚದಲ್ಲಿ ಹೆಚ್ಚಳವನ್ನು ಸ್ಪಷ್ಟವಾಗಿ ನೋಡಬಹುದು.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಮಕ್ಕಳು ಮತ್ತು ವೈವಾಹಿಕ ಜೀವನ - Children & Marriage life according Capricorn future 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷ 2021 ರಲ್ಲಿ ವೈವಾಹಿಕ ಸ್ಥಳೀಯರ ದಾಂಪತ್ಯ ಜೀವನಕ್ಕೆ ಈ ವರ್ಷವೂ ಉತ್ತಮ ಫಲಿತಾಂಶಗಳನ್ನು ತರಲಿದೆ.

ಆದಾಗ್ಯೂ ಈ ವರ್ಷಪೂರ್ತಿ ಶನಿ ದೇವರು ನಿಮ್ಮ ರಾಶಿಚಕ್ರದ ಏಳನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಇದರಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಸ್ವಲ್ಪ ಮಂದತೆ ಬರಬಹುದು. ಆದರೆ ಜನವರಿ ರಿಂದ ಏಪ್ರಿಲ್ ವರೆಗೆ ಗುರುವಿನ ದೃಷ್ಟಿ ಕೂಡ ನಿಮ್ಮ ಏಳನೇ ಮನೆಯ ಮೇಲಿರುತ್ತದೆ.

ಇದರ ನಂತರ ಪರಿಸ್ಥಿತಿಗಳು ಸುಧಾರಿಸುತ್ತವೆ ಮತ್ತು ವಿಶೇಷವಾಗಿ 15 ಸೆಪ್ಟೆಂಬರ್ ರಿಂದ 20 ನವೆಂಬರ್ ಮಧ್ಯದ ವರೆಗೆ ಗುರುವಿನ ಶುಭ ಪರಿಣಾಮವು ನಿಮ್ಮ ಮೇಲೆ ಬೀರುತ್ತದೆ. ಇದು ನಿಮ್ಮ ವೈವಾಹಿಕ ಜೀವನವನ್ನು ಸಂತೋಷಪಡಿಸುವ ಸಾಧ್ಯತೆ ಇದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಮತ್ತು ನಿಮ್ಮ ಜೀವನ ಸಂಗಾತಿಯ ಪರಸ್ಪರ ಬಗೆಗಿನ ತಿಳುವಳಿಕೆ ಮೊದಲಿಗಿಂತ ಹೆಚ್ಚಾಗುತ್ತದೆ ಮತ್ತು ಇಬ್ಬರ ಸಂಬಂಧದಲ್ಲಿ ನಿಕಟತೆಯನ್ನು ಅನುಭವಿಸುತ್ತೀರಿ. ಇದರೊಂದಿಗೆ ನಿಮ್ಮ ಪ್ರೀತಿ ಕೂಡ ಹೆಚ್ಚಾಗುತ್ತದೆ.

ವಿಶೇಷವಾಗಿ ಜನವರಿ ಅಂತ್ಯದಲ್ಲಿ ಶುಕ್ರ ದೇವರು ನಿಮ್ಮ ರಾಶಿಚಕ್ರ ಅಂದರೆ ನಿಮ್ಮ ಮೊದಲನೇ ಮನೆಯಲ್ಲಿ ಗೋಚರಿಸುವ ಕಾರಣದಿಂದಾಗಿ, ನಿಮ್ಮ ಪ್ರೀತಿ ಜೀವನದಲ್ಲಿ ಪ್ರೀತಿಯ ಹೆಚ್ಚಳವಾಗುತ್ತದೆ.

ಇದರೊಂದಿಗೆ ಕೆಂಪು ಗ್ರಹವಾದ ಮಂಗಳ ಗ್ರಹವು ಕರ್ಕ ರಾಶಿಯಲ್ಲಿ ಎರಡು ಜೂನ್ ರಿಂದ ಇಪ್ಪತ್ತು ಜೂಲೈ ಮಧ್ಯೆ ತನ್ನ ನೇರವಾದ ಪರಿಣಾಮವನ್ನು ನಿಮ್ಮ ದಾಂಪತ್ಯ ಜೀವನದ ಮೇಲೆ ನಕಾರಾತ್ಮಕವಾಗಿ ಬೀರುತ್ತದೆ. ಇದರಿಂದ ವೈವಾಹಿಕ ಜೀವನದಲ್ಲಿ ಒತ್ತಡ ಮತ್ತು ಘರ್ಷಣೆಯ ಪರಿಸ್ಥಿತಿ ಉದ್ಭವಿಸಬಹುದು.

ಇದರ ನಂತರ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ ಮತ್ತು ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುವ ಸಾಧ್ಯತೆ ಇದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ನಿಮ್ಮ ಮಕ್ಕಳ ಭಾಗವನ್ನು ನೋಡಿದರೆ, ಅವರಿಗೆ ಸಂಬಂಧಿಸಿದ ಫಲಿತಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ತಮವಾಗಿರುತ್ತವೆ. ಮಕ್ಕಳು ಮೂಡಿಯಾಗಿರುತ್ತಾರೆ ಮತ್ತು ಆನಂದದಿಂದ ತಮ್ಮ ಜೀವನವನ್ನು ಕಳೆಯುತ್ತಾರೆ.

ಮಕ್ಕಳು ಪ್ರಗತಿ ಪಡೆಯುತ್ತಾರೆ ಮತ್ತು ಅವರ ಮಾನಸಿಕ ಶಕ್ತಿ ಬೆಳೆಯುತ್ತದೆ. ಇದರಿಂದ ಅವರು ಅಧ್ಯಯನದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ.

ಈ ವರ್ಷ ಅವರು ದೂರಸ್ಥ ಪ್ರಯಾಣಕ್ಕೆ ಹೋಗುವ ಸಾಧ್ಯತೆ ಇದೆ, ಅಲ್ಲಿ ಅವರು ನಿಮ್ಮ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಪ್ರೀತಿ ಜೀವನ - Love life according Capricorn future 2021

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಪ್ರೀತಿಯಲ್ಲಿರುವ ಈ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷ ನಿಮ್ಮ ರಾಶಿಚಕ್ರದಲ್ಲಿನ ಐದನೇ ಮನೆಯ ರಾಹುವು ನಿಮ್ಮ ಪ್ರೀತಿ ಜೀವನದಲ್ಲಿ ಅನಿರೀಕ್ಷಿತ ಸಂತೋಷಗಳನ್ನು ತರಬಹುದು. ಈ ಕಾರಣದಿಂದಾಗಿ ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವನ್ನು ನೀವು ಇನ್ನಷ್ಟು ಉತ್ತಮಗೊಳಿಸಲು ಯಾವುದೇ ಮಟ್ಟಿಗೆ ಹೋಗಬಹುದು.

ಈ ಸಮಯದಲ್ಲಿ ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷಪಡಿಸಲು ನಿಮ್ಮಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುವಿರಿ. ಇದರ ಪರಿಣಾಮವನ್ನು ಸಹ ನೀವು ಪಡೆಯುತ್ತೀರಿ.

ವರ್ಷ 2021 ರಲ್ಲಿ ನಿಮ್ಮ ಪ್ರೀತಿಪಾತ್ರರು ನಿಮ್ಮ ಪ್ರೀತಿಯಲ್ಲಿ ಹುಚ್ಚರಾಗುತ್ತಾರೆ ಮತ್ತು ನೀವಿಬ್ಬರು ಪ್ರೀತಿ ಮದುವೆಯಾಗಲು ಸಹ ನಿರ್ಧರಿಸಬಹುದು.

ವಿಶೇಷವಾಗಿ ಈ ವರ್ಷದ ಜನವರಿ, ಫೆಬ್ರವರಿ, ಏಪ್ರಿಲ್ ಮತ್ತು ಮೇ ಸಮಯವೂ ನಿಮಗೆ ಬಹಳ ಉತ್ತಮವೆಂದು ಸಾಬೀತುಪಡಿಸುತ್ತವೆ. ಈ ಸಮಯದಲ್ಲಿ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಪ್ರೇಮ ವ್ಯವಹಾರಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಇದರಿಂದ ನೀವು ನಿಮ್ಮ ಪ್ರೀತಿ ಜೀವನವನ್ನು ಚೆನ್ನಾಗಿ ಆನಂದಿಸಲಾಗುತ್ತದೆ.

ಆದರೂ ಈ ವರ್ಷ ಮಾರ್ಚ್ ತಿಂಗಳಲ್ಲಿ ನೀವು ಸ್ವಲ್ಪ ಜಾಗರೂಕರಾಗಿರುವ ಅಗತ್ಯವಿದೆ ಇಲ್ಲದಿದ್ದರೆ ಸಂಬಂಧದಲ್ಲಿ ಹುಳಿ ಬರಬಹುದು.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ಜೂಲೈ ಮತ್ತು ಆಗಸ್ಟ್ ಮಧ್ಯೆ ಯಾವುದೇ ರೀತಿಯ ಸಂಘರ್ಷದ ಪರಿಸ್ಥಿತಿ ನಿರ್ಮಿಸುತ್ತದೆ.

ಒಟ್ಟಾರೆಯಾಗಿ ಹೇಳಿದರೆ, ಸೆಪ್ಟೆಂಬರ್ ರಿಂದ ನವೆಂಬರ್ ಮಧ್ಯದ ಸಮಯವೂ ನಿಮಗೆ ಅತ್ಯಂತ ಅನುಕೂಲಕರವಾಗಿರುತ್ತದೆ ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರೀತಿ ಜೀವನದಲ್ಲಿ ನೀವು ಗಮನಾರ್ಹ ಯಶಸ್ಸು ಪಡೆಯುತ್ತೀರಿ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಅರೋಗ್ಯ - Health life according Capricorn future 2021

ಮಕರ ರಾಶಿ ಭವಿಷ್ಯ 2021ರ ಪ್ರಕಾರ, ಜಾತಕದಲ್ಲಿ ನಿಮ್ಮ ರಾಶಿಯ ಅಧಿಪತಿ ನಿಮ್ಮದೇ ರಾಶಿಚಕ್ರದಲ್ಲಿ ನೆಲೆಗೊಂಡಿರುವುದರಿಂದ, ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಇದರಿಂದ ನಿಮ್ಮ ಆರೋಗ್ಯವು ಬಲವಾಗಿರುತ್ತದೆ.

ಶನಿಯ ಬಲವಾದ ಸ್ಥಾನದಿಂದಾಗಿ, ಈ ವರ್ಷ ನೀವು ಮೊದಲಿಗಿಂತ ಹೆಚ್ಚು ಉತ್ತಮವಾದ ಆರೋಗ್ಯವನ್ನು ಅನುಭವಿಸುತ್ತೀರಿ.

ಈ ವರ್ಷ ನೀವು ನಿಮ್ಮ ದೀರ್ಘಕಾಲದ ರೋಗದಿಂದಲೂ ಮುಕ್ತರಾಗುವ ಸಾಧ್ಯತೆ ಇದೆ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ, ವರ್ಷದ ಆರಂಭದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು ಆದರೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊರೆತುಪಡಿಸಿ ಈ ವರ್ಷ ನಿಮಗೆ ಯಾವುದೇ ದೊಡ್ಡ ಕಾಯಿಲೆಯಾಗುವ ಸಾಧ್ಯತೆ ಕಂಡುಬರುತ್ತಿಲ್ಲ. ಈ ಸಮಯದಲ್ಲಿ ನೀವು ಯೋಗ ಮತ್ತು ಧ್ಯಾನ ಮಾಡುವುದು ನಿಮಗೆ ಉತ್ತಮ. ಆದ್ದರಿಂದ ನಿಮಗೆ ಸಮಯ ಸಿಕ್ಕಾಗಲೆಲ್ಲಾ ನಿಯಮಿತವಾಗಿ ಅದನ್ನು ಮಾಡಿ.

ಮಕರ ರಾಶಿ ಭವಿಷ್ಯ 2021 ರ ಪ್ರಕಾರ ಜ್ಯೋತಿಷ್ಯ ಪರಿಹಾರ - Astrological remedies according Capricorn future 2021

  • ಪಂಚಧಾತು ಅಥವಾ ಅಷ್ಟಧಾತುವಿನಲ್ಲಿ ತವರಿಸಲಾದ ಉತ್ತಮ ಗುಣಮಟ್ಟದ ನೀಲಮಣಿ ರತ್ನವನ್ನು ಶನಿವಾರದಂದು ಮಧ್ಯದ್ಯ ಬೆರಳಿನಲ್ಲಿ ಧರಿಸುವುದು ಉತ್ತಮವಾಗಿರುತ್ತದೆ.
  • ನೀವು ಬಯಸಿದರೆ ಓಪಲ್ ರತ್ನವನ್ನು ಬೆಳ್ಳಿಯ ಉಂಗುರದಲ್ಲಿ ತಯಾರಿಸಿ ಶುಕ್ರವಾರದಂದು ಅನಾಮಿಕೆ ಬೆರಳಿನಲ್ಲಿ ಧರಿಸಬಹುದು
  • ಚಿಕ್ಕ ಹುಡುಗಿಯರ ಕಾಲು ಮುಟ್ಟಿ ಅವರ ಆಶೀರ್ವಾದ ಪಡೆಯಿರಿ ಮತ್ತು ಪ್ರತಿಯೊಂದು ಶುಕ್ರವಾರದಂದು ಅವರಿಗೆ ಯಾವುದೇ ಬಿಳಿ ತಿಂಡಿಯನ್ನು ನೀಡುವುದು ಉತ್ತಮ.
  • ಮಂಗಳವಾರದಂದು ರಕ್ತದಾನ ಮಾಡಿ ಮತ್ತು ಮನೆಯಿಂದ ದೂರ ದಾಳಿಂಬೆ ಮರವನ್ನು ನೆಡುವುದುದರಿಂದ ನಿಮ್ಮ ಕಷ್ಟಗಳಿಂದ ನೀವು ತಪ್ಪಿಸಬಹುದು.
  • ಒಂದು ದಿನ ಮೊದಲೇ ನೆನೆಸಿದ ಸಂಪೂರ್ಣ ಹೆಸರು ಬೆಳೆಯನ್ನು ಬುಧವಾರದಂದು ನಿಮ್ಮ ಕೈಯಿಂದ ಹಸುವಿಗೆ ತಿನ್ನಿಸಿ. ಇದು ನಿಮ್ಮ ಅದೃಷ್ಟವನ್ನು ಬಲಪಡಿಸುತ್ತದೆ.
More from the section: Horoscope 2979
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2023
© Copyright 2024 AstroCAMP.com All Rights Reserved