• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ಮಿಥುನ ರಾಶಿ ಭವಿಷ್ಯ 2022 - Gemini Yearly Horoscope 2022 in Kannada

Author: -- | Last Updated: Fri 27 Aug 2021 10:35:45 AM

ಪ್ರತಿ ಹೊಸ ವರ್ಷದಲ್ಲಿ ಒಂದು ಭರವಸೆಯ ಎಳೆಯನ್ನು ಕಟ್ಟಲಾಗುತ್ತದೆ. ಕಳೆದ ವರ್ಷಕ್ಕಿಂತ ಮುಂಬರುವ ವರ್ಷವೂ ಉತ್ತಮವಾಗಿರುತ್ತದೆ ಎಂದು ನಿರೀಕ್ಷೆ ಇರುತ್ತದೆ. ನಿರೀಕ್ಷೆಯು ಕುತೂಹಲವನ್ನು ವೃದ್ಧಿಸುತ್ತದೆ ಮತ್ತು ಈ ಕುತೂಹಲವು ನಿಮ್ಮನ್ನು ಇಲ್ಲಿಗೆ ಕರೆತಂದಿದೆ. 2022 ರಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರ ದಾಂಪತ್ಯ ಜೇವನವು ಹೇಗಿರುತ್ತದೆ ಎಂದು ತಿಳಿಯಲು ಬಯಸುವ ಜನರು ನಿಮ್ಮಲ್ಲಿ ಅನೇಕರಿದ್ದಾರೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಕೆಲವರು 2022 ರಲ್ಲಿ ಮಿಥುನ ರಾಶಿಚಕ್ರದ ಜನರ ಅರೋಗ್ಯ ಜೀವನವು ಹೇಗಿರುತ್ತದೆ ಎಂದು ತಿಳಿಯಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಎಲ್ಲಾ ಪ್ರಶ್ನೆಗಳನ್ನು ವಾರ್ಷಿಕ ರಾಶಿ ಭವಿಷ್ಯ 2022 ರ ಮೂಲಕ ಪರಿಹರಿಸುವುದು ನಮ್ಮ ಪ್ರಯತ್ನ. ನಡೆಯಿರಿ, ನಿಮ್ಮ ರಾಶಿ ಭವಿಷ್ಯದ ಪ್ರಕಾರ ನಿಮ್ಮ ಭವಿಷ್ಯದ ಮುನ್ಸೂಚನೆಯನ್ನು ಪಡೆಯಲು ಪ್ರಯತ್ನಿಸೋಣ:

Gemini Horoscope 2022 In Kannada

ವರ್ಷ 2022 ರಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರ ಆರ್ಥಿಕ ಜೀವನವು ಸಾಮಾನ್ಯ ಫಲಿತಾಂಶಗಳನ್ನು ನೀಡಬಹುದು. ವರ್ಷ 2022 ಆರಂಭವು ಅಷ್ಟು ಉತ್ತಮವಾಗಿರುವುದಿಲ್ಲ ಆದರೆ ವರ್ಷದ ಅಂತ್ಯವು ಆರ್ಥಿಕವಾಗಿ ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗಬಹುದು.

ವರ್ಷದ ಆರಂಭದ ತಿಂಗಳಲ್ಲಿ ಅಂದರೆ ಜನವರಿ ಮಧ್ಯದಲ್ಲಿ ಮಂಗಳ ದೇವರ ಸಂಚಾರವು ನಿಮ್ಮ ರಾಶಿಚಕ್ರದ ಏಳನೇ ಮನೆಯಲ್ಲಿರುತ್ತದೆ ಮತ್ತು ಅವರು ನಿಮ್ಮದೇ ಲಗ್ನದ ಮನೆ ಅಂದರೆ ನಿಮ್ಮ ಮೊದಲನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಕಾರಣದಿಂದಾಗಿ ನಿಮ್ಮ ಆತ್ಮವಿಶ್ವಾಸದ ಹೆಚ್ಚಳವನ್ನು ನೀವು ಅನುಭವಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಏಪ್ರಿಲ್ ಮಧ್ಯದಲ್ಲಿ ಗುರು ಗ್ರಹವು ಮೀನಾ ರಾಶಿಯೊಂದ ಹಾದುಹೋಗುವ ಮೂಲಕ ನಿಮ್ಮ ಹತ್ತನೇ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಮತ್ತು ಶನಿ ದೇವರು ಕುಂಭ ರಾಶಿಯಿಂದ ಹಾದುಹೋಗುವ ಮೂಲಕ ನಿಮ್ಮ ಒಂಬತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತಾರೆ. ಇದರ ಶುಭ ಫಲಿತಾಂಶಗಳನ್ನು ನೀವು ಪಡೆಯುತ್ತೀರಿ. ಈ ಸಂಚಾರದ ಸಮಯದಲ್ಲಿ ನಿಮ್ಮ ವೃತ್ತಿ ಜೀವನ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ವಿಶೇಷ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಿಂದ ಸಂತೋಷವಾಗಿರಬಹುದು ಮತ್ತು ಅವರು ಮಾನಸಿಕವಾಗಿ ಅವರು ಹೆಚ್ಚು ತೀಕ್ಷ್ಣತೆಯನ್ನು ಅನುಭವಿಸುತ್ತಾರೆ. ಆರ್ಥಿಕ, ವೃತ್ತಿ ಮತ್ತು ಶಿಕ್ಷಣದ ವಿಷಯಗಳಲ್ಲಿ ಈ ವರ್ಷ ಯಾವುದೇ ನಿರ್ಧಾರವನ್ನು ನೀವು ತುರಾತುರಿಯಲ್ಲಿ ತೆಗೆದುಕೊಳ್ಳಬಾರದು ಎಂಬುದು ಗಮನಿಸಬೇಕಾಗ ಸಂಗತಿ.

ಮತ್ತೊಂದೆಡೆ, ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಈ ವರ್ಷ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಎರಡೂ ಕ್ಷೇತ್ರಗಳಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ವರ್ಷ ಮಿಥುನ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು. ಈ ವಾರ ನೀವು ಸಣ್ಣ ಪುಟ್ಟ ದೈಹಿಕ ಸಮಸ್ಯೆಗಳನ್ನು ಸಹ ನಿರ್ಲಕ್ಷಿಸದಿರಲು ಪ್ರಯತ್ನಿಸಿ.

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ಆರ್ಥಿಕ ಜೀವನ

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನೀವು ಆರ್ಥಿಕ ದೃಷ್ಟಿಕೋನದಿಂದ ಸಾಮಾನ್ಯ ಫಲಿತಾಂಶಗಳನ್ನು ಪಡೆಯುತ್ತೀರಿ. ವರ್ಷದ ಪ್ರಾರಂಭವು ಕೆಟ್ಟದಾಗಿರುವ ಸಾಧ್ಯತೆ ಇದೆ. ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ ನಿಮ್ಮ ರಾಶಿಯಲ್ಲಿ ಶನಿ ದೇವರು ರಹಸ್ಯದ ಎಂಟನೇ ಮನೆಯಲ್ಲಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸ್ಥಳೀಯರಿಗೆ ಹಣಕಾಸಿನ ನಷ್ಟವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರಬಹುದು. ಆದಾಗ್ಯೂ, 27 ಏಪ್ರಿಲ್ ನಂತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ನೋಡಬಹುದು. ಶನಿ ದೇವ 29 ರಂದು ತನ್ನ ಸಂಚಾರದ ನಿಮ್ಮ ಅದೃಷ್ಟದ ಒಂಬತ್ತನೇ ಮನೆಗೆ ಪ್ರವೇಶಿಸುತ್ತಾರೆ. ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯೋಜನೆಯ ಸಾಧ್ಯತೆ ಇದೆ.

ಇದಲ್ಲದೆ ಗುರು ಗ್ರಹವು ತನ್ನ ರಾಶಿ ಅಂದರೆ ಮೀನಾ ರಾಶಿಯಲ್ಲಿ ಸಾಗುವುದು ಮಿಥುನ ರಾಶಿಚಕ್ರದ ಕರ್ಮದ ಮನೆ ಅಂದರೆ ಒಂಬತ್ತನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಈ ಸ್ಥಾನವು ಈ ರಾಶಿಚಕ್ರದ ಸ್ಥಳೀಯರಿಗೆ ಆರ್ಥಿಕ ದೃಷ್ಟಿಕೋನದಿಂದ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಅವಧಿಯಲ್ಲಿ ನಿಮ್ಮ ಸಿಲುಕಿಕೊಂಡಿರುವ ಹಣವನ್ನು ನೀವು ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಪಡೆಯಬಹುದು ಅಥವಾ ವಿದೇಶದಿಂದ ಯಾವುದೇ ರೀತಿಯ ಹಣವನ್ನು ಪಡೆಯಬಹುದು. ಇದ್ದಕ್ಕಿದ್ದಂತೆ ನಿಮಗೆ ಹಣಕಾಸಿನ ಲಾಭವಾಗಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ವರ್ ಮೌ ಮಧ್ಯದಲ್ಲಿ ಮೂರು ಗ್ರಹಗಳ ( ಮಂಗಳ, ಶುಕ್ರ ಮತ್ತು ಗುರು ) ಸಂಯೋಜನೆಯು ಆರ್ಥಿಕವಾಗಿ ನಿಮಗೆ ಸಮಸ್ಯೆಯನ್ನು ನೀಡಬಹುದು. ಈ ಸಮಯದಲ್ಲಿ ನಿಮ್ಮ ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಬೇಕು. ಈ ಅವಧಿಯಲ್ಲಿ ಹಣ ಸಂಗ್ರಹವಾಗುವುದು ಸಹ ಕಷ್ಟಕರವಾಗಿರುತ್ತದೆ. ಈ ವರ್ಷದ ಅಂತ್ಯವು ನಿಮಗೆ ಶುಭವೆಂದು ಸಾಬೀತುಪತುಪಡಿಸಬಹುದು. ವರ್ಷದ ಅಂತ್ಯದಲ್ಲಿ ಅಂದರೆ ಸೆಪ್ಟೆಂಬರ್ ರಿಂದ ನವೆಂಬರ್ ವರೆಗಿನ ಸಮಯದಲ್ಲಿ ಶನಿ ದೇವ ನಿಮ್ಮ ಅನಿಶ್ಚಿತತೆಯ ಮನೆಯಲ್ಲಿ ಕುಳಿತಿರುತ್ತಾರೆ. ಈ ಕಾರಣದಿಂದಾಗಿ ನಿಮ್ಮ ಅನಗತ್ಯ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುವ ಸಾಧ್ಯತೆ ಇದೆ ಮತ್ತು ನಿಮ್ಮ ಹಣಕಾಸು ಸಂಗ್ರಹಿಸುವಲ್ಲಿ ನೀವು ವಿಫಲರಾಗಬಹುದು.

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ವೃತ್ತಿ ಜೀವನ

ವರ್ಷ 2022 ರಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನವು ಹೇಗಿರುತ್ತದೆ ಎಂದು ತಮ್ಮ ಮುಂಬರುವ ವರ್ಷದ ಬಗ್ಗೆ ಚಿಂತೆಗಳಿರಬಹುದು. ಈ ವರ್ಷ ನಿಮ್ಮ ವೃತ್ತಿ ಜೀವನದ ದೃಷ್ಟಿಕೋನದಿಂದ ಶುಭವಾಗಿರಲಿದೆ ಎಂದು ತಿಳಿದುಕೊಳ್ಳಿ. ಈ ವರ್ಷ ನಿಮ್ಮ ಜೀವನವನ್ನು ಉತ್ತಮಗೊಳಿಸಲು ನೀವು ಉತ್ತಮವಾಗಿ ಪ್ರಯತ್ನಿಸುವುದನ್ನು ಕಾಣಲಾಗುತ್ತದೆ. ಈ ವರ್ಷ ನಿಮ್ಮ ವೃತ್ತಿ ಜೀವನದ ಬಗ್ಗೆ ನೀವು ಸಾಕಷ್ಟು ಕೇಂದ್ರೀಕೃತವಾಗಿ ವರ್ತಿಸುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಕೆಲಸದ ಸ್ಥಳದ ಹತ್ತನೇ ಮನೆಯ ಅಧಿಪತಿ, ಏಪ್ರಿಲ್ ತಿಂಗಳ ವರೆಗೆ ನಿಮ್ಮದೇ ಮನೆಯಲ್ಲಿ ಅನುಕೂಲಕ್ರ ಸ್ಥಾನದಲ್ಲಿ ಕುಳಿತಿರುತ್ತಾರೆ.

ವರ್ಷದ ಆರಂಭದಲ್ಲಿ ಮಂಗಳ ಗ್ರಹದ ಸಂಚಾರವು ಸಹಭಾಗಿತ್ವದ ಏಳನೇ ಮನೆಯಲ್ಲಿರುವ ಕಾರಣದಿಂದಾಗಿ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದ ವಾತಾವರಣವು ಉತ್ತಮವಾಗಿರುತ್ತದೆ ಮತ್ತು ಸಹೋದ್ಯೋಗಿಗಳ ಮೂಲಕ ನೀವು ಉತ್ತಮ ಬೆಂಬಲವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಸಂಪೂರ್ಣ ವರ್ಷದ ಸಮಯದಲ್ಲಿ ಜನವರಿ ರಿಂದ ಮೇ ವರೆಗೆ ನಿಮ್ಮ ವೃತ್ತಿ ಜೀವನದ ದೃಷ್ಟಿಕೋನದಿಂದ ಅತ್ಯಂತ ಅನುಕೂಲಕರವಾಗಿ ಕಂಡುಬರುತ್ತಿದೆ. ಏಕೆಂದರೆ ಗುರು ಗ್ರಹವು ಈ ಸಮಯದಲ್ಲಿ ಪ್ರಮುಖವಾಗಿ ನಿಮ್ಮ ರಾಶಿಚಕ್ರದ ಅದೃಷ್ಟದ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಜೂನ್ ರಿಂದ ಜೂಲೈ ವರೆಗೆ ವೃತ್ತಿ ಜೀವನದ ದೃಷ್ಟಿಯಿಂದ ಜಾಗರೂಕರಾಗಿರುವ ಅಗತ್ಯವಿದೆ. ಈ ಸಮಯದಲ್ಲಿ ಕೆಲಸದ ಹೊರೆಯಿಂದಾಗಿ ನೀವು ಸ್ವಲ್ಪ ಚಿಂತೆಗೀಡಾಗಬಹುದು. .

ಮೇ ಮಧ್ಯದಿಂದ ಆಗಸ್ಟ್ ಮಧ್ಯದ ವರೆಗಿನ ಸಮಯದ ನಡುವೆ ಮಂಗಳ ಗ್ರಹವು ವೃತ್ತಿ ಜೀವನ ಮತ್ತು ಕೆಲಸದ ಸ್ಥಳದ ಹತ್ತನೇ ಮನೆ ಮತ್ತು ಕರ್ಮ, ಲಾಭ ಮತ್ತು ಪ್ರಯೋಜನದ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಮಿಥುನ ರಾಶಿಚಕ್ರದ ಜನರು ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಅಥವಾ ಅಪೇಕ್ಷಿತ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಈ ಸಂಚಾರವು ಉತ್ತಮವೆಂದು ಸಾಬೀತುಪಡಿಸಬಹುದು. ಆದಾಗ್ಯೂ, ಈ ಸಮಯದಲ್ಲಿ ಕೆಲಸದ ಸ್ಥಳಕ್ಕೆ ಸಂಬಂಧಿಸಿದ ಶತ್ರುಗಳಿಂದ ಎಚ್ಚರದಿಂದಿರಬೇಕು. ವರ್ಷದ ಅಂತ್ಯದ ತಿಂಗಳು ಡಿಸೆಂಬರ್, ವೃತ್ತಿಜೀವನದ ದೃಷ್ಟಿಕೋನದಿಂದ ವಿಶೇಷ ಫಲಿತಾಂಶವನ್ನು ನೀಡುತ್ತದೆ ಎಂದು ಸಾಬೀತುಪಡಿಸುತ್ತದೆ. ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಫಲಿತಾಂಶ ಪಡೆಯುವ ನಿರೀಕ್ಷೆಯಿದೆ.

ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ಮಿಥುನ ರಾಶಿ ಭವಿಷ್ಯ 2022 ಪ್ರಕಾರ ಅರೋಗ್ಯ ಜೀವನ :

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಅರೋಗ್ಯ ದೃಷ್ಟಿಕೋನದಿಂದ ಜಾಗರೂಕರಾಗಿರಬೇಕು. ವರ್ಷದ ಪ್ರಾರಂಭದಲ್ಲಿ ಶನಿ ದೇವ ನಿಮ್ಮ ರಾಶಿಚರ್ಕದ ಎಂಟನೇ ಮನೆ ಅಂದರೆ ವಯಸ್ಸಿನ ಮನೆಯಲ್ಲಿ ಕುಳಿತುಕೊಳ್ಳುತ್ತದೆ. ಇದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಶನಿಯ ಈ ಸ್ಥಾನದ ಕಾರಣದಿಂದಾಗಿ ಆರಂಭದ ತಿಂಗಳುಗಳಲ್ಲಿ ನಿಮ್ಮ ಅರೋಗ್ಯ ಹದಗೆಡುವ ನಿರೀಕ್ಷೆಯಿದೆ. ಈ ಸಮಯದಲ್ಲಿ ವಾಹನವನ್ನು ಚಲಾಯಿಸುವಾಗ ನೀವು ಜಾಗರೂಕರಾಗಿರಬೇಕು. ಮಿಥುನ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಮಾನಸಿಕವಾಗಿ ತೊಂದರೆಗೀಡಾಗಬಹುದು.

17 ಫೆಬ್ರವರಿ ರಿಂದ ಏಪ್ರಿಲ್ ವರೆಗಿನ ಸಮಯವೂ ನಿಮಗೆ ಕೆಲವು ದೈಹಿಕ ಸಮಸ್ಯೆಗಳನ್ನು ನೀಡಬಹುದು. ಏಕೆಂದರೆ ಈ ಸಮಯದಲ್ಲಿ ರೋಗಗಳ ಅಂಶ ಗ್ರಹ ಮಂಗಳ ದೇವ ನಿಮ್ಮ ರಾಶಿಯ ಏಳನೇ ಮನೆಯಲ್ಲಿರುತ್ತಾರೆ ಮತ್ತು ತನ್ನದೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಸಮಯದಲ್ಲಿ ಆಮ್ಲೀಯತೆ ಮತ್ತು ಶೀತದಂತಹ ಸಮಸ್ಯೆಗಳು ನಿಮಗೆ ತೊಂದ್ರೆ ನೀಡುತ್ತವೆ. ಸ್ಥಳೀಯರು ಕೀಲುಗಳಲ್ಲಿ ನಿರಂತರ ನೋವಿನ ಬಗ್ಗೆ ದೂರು ನೀಡಬಹುದು. ಈ ಸಮಯದಲ್ಲಿ ನೀವು ಶೀತ ಮತ್ತು ಶೀತದ ವಸ್ತುಗಳನ್ನು ಸೇವಿಸುವುದನ್ನು ತಪಿಸಲು ಪ್ರಯತ್ನಿಸಿ, ಪೌಷ್ಟಿಕ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ಯೋಗ - ಧ್ಯಾನವನ್ನು ಆಶ್ರಯಿಸಿ. ಅದೇ ಸಮಯದಲ್ಲಿ ಮತ್ತೊಂದೆಡೆ, ಆಗಸ್ಟ್ ರಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ನಿಮ್ಮ ಕೆಟ್ಟ ಆಹಾರ ಪದ್ಧತಿ ಸುಧಾರಿಸುವುದಿಲ್ಲ. ಇದರ ನಕಾರಾತ್ಮಕ ಪರಿಣಾಮವು ನಿಮ್ಮ ಅರೋಗ್ಯ ಕ್ಷೀಣಿಸುವುದಕ್ಕೆ ಕಾರಣವಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಸೂರ್ಯ ದೇವ ನಿಮ್ಮ ರಾಶಿಚಕ್ರದ ಹೃದಯ ಮತ್ತು ಶ್ವಾಸಕೋಶಗಳ ನಾಲ್ಕನೇ ಮನೆಗೆ ಗೋಚರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಸಣ್ಣ ಪುಟ್ಟ ಮತ್ತು ಸರಳವಾಗಿ ಕಾಣುವ ರೋಗದ ಬಗ್ಗೆ ಸ್ವಲ್ಪವೂ ನಿರ್ಲಕ್ಷವಹಿಸದೆ, ತಕ್ಷಣವೇ ಉತ್ತಮ ವೈದ್ಯರನ್ನು ಸಂಪರ್ಕಿಸಲು ನಿಮಗೆ ಸಲಹೆ ನೀಡಲಾಗಿದೆ.

ಮಿಥುನ ರಾಶಿಚಕ್ರದ ಸ್ಥಳೀಯರು ಈ ವರ್ಷದ ಫೆಬ್ರವರಿ ರಿಂದ ಏಪ್ರಿಲ್ ವರೆಗೆ ವಿಶೇಷವಾಗಿ ಜಾಗರೂಕರಾಗಿರಬೇಕು/ ಏಕೆಂದ್ರೆ ನಿಮ್ಮ ರೋಗಗಳ ಆರನೇ ಮನೆಯ ಅಧಿಪತಿ ಈ ಸಮಯದಲ್ಲಿ ಏಳನೇ ಮನೆಗೆ ಪ್ರವೇಶಿಸುತ್ತಾರೆ. ಆದಾಗ್ಯೂ, ಆರೋಗ್ಯದ ದೃಷ್ಟಿಕೋನದಿಂದ ನವೆಂಬರ್ ನಿಂದ ವರ್ಷದ ಅಂತ್ಯದವರೆಗೆ ಉತ್ತಮವಾಗಿರುವ ಸಾಧ್ಯತೆ ಇದೆ.

ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ಶಿಕ್ಷಣ :

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಶಿಕ್ಷಣದ ದೃಷ್ಟಿಕೋನದಿಂದ ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರಲಿದೆ. ವಿಶೇಷವಾಗಿ ವರ್ಷದ ಪ್ರಾರಂಭದ ಬಗ್ಗೆ ಮಾತನಾಡಿದರೆ, ಯಾವುದೇ ರೀತಿಯ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾಗಿರಬಹುದು. ಈ ಸಮಯದಲ್ಲಿ ಅವರು ಉತ್ತಮ ಸಾಧನೆ ಮಾಡಬಹುದು. ಉತ್ತಮ ಅಂಕಗಳನ್ನು ಪಡೆಯಬಹುದು. ಏಕೇನರೆ ಜ್ಞಾನ ಮತ್ತು ಸೌಂದರ್ಯದ ಅಂಶ ಗುರು ಗ್ರಹದ ಉಪಸ್ಥಿತಿಯು ನಿಮ್ಮ ರಾಶಿಯ ಒಂಬತ್ತನೇ ಮನೆಯಲ್ಲಿರುತ್ತದೆ ಮತ್ತು ಈ ಸಮಯದಲ್ಲಿ ಅವರು ನಿಮ್ಮ ಶಿಕ್ಷಣದ ಮನೆಯ ಮೇಲೆ ಸಂಪೂರ್ಣವಾಗಿ ದೃಷ್ಟಿ ನೀಡುತ್ತಾರೆ.

ಏಪ್ರಿಲ್ ರಿಂದ ಜೂಲೈ ತಿಂಗಳ ಸಮಯದಲ್ಲಿ ಗುರು ಗ್ರಹದ ಸಂಚಾರವು ತನ್ನದೇ ರಾಶಿಯಾದ ಮೀನಾ ರಾಶಿಯಲ್ಲಿ ಸಂಭವಿಸುತ್ತದೆ. ಅಲ್ಲಿ ಅವರು ಶಿಕ್ಷಣದ ನಿಮ್ಮ ನಾಲ್ಕನೇ ಮನೆಯ ಮೇಲೆ ದೃಷ್ಟಿ ಹಾಕುತ್ತಾರೆ. ಈ ಸ್ಥಾನವು ಶೈಕ್ಷಣಿಕ ವಿದ್ಯಾರ್ಥಿಗಳಿಗೆ ವಿಶೇಷವಾಗಲಿದೆ. ಈ ಸಮಯದಲ್ಲಿ ತಮ್ಮ ಉತ್ತಮ ಪ್ರದರ್ಶನದಿಂದಾಗಿ ಮಿಥುನ ರಾಶಿಚಕ್ರದ ಜನರು ಸಂತೋಷವಾಗಿರಬಹುದು. ಈ ತಿಂಗಳುಗಳಲ್ಲಿ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳು ಬುದ್ಧಿಯಿಂದ ತುಂಬಾ ತೀಕ್ಷ್ಣವಾಗಿರುತ್ತಾರೆ. ಪ್ರತಿಯೊಂದು ವಿಷಯದಲ್ಲೂ ಅವರ ಸಾಧನೆ ಉತ್ತಮವಾಗಿ ಉಳಿಯುವ ಸಾಧ್ಯತೆ ಇದೆ ಮತ್ತು ಯಾವುದೇ ವಿಷಯವನ್ನು ಅರ್ಥಮಾಡಿಕೊಳ್ಳುವುದು, ಉಳಿದ ವಿದ್ಯಾರ್ಥಿಗಳಿಗಿಂತ ಅವರಿಗೆ ಹೆಚ್ಚು ಸುಲಭವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಆದಾಗ್ಯೂ, 27 ಏಪ್ರಿಲ್ ನಂತರ ಶನಿ ಗ್ರಹದ ಸಂಚಾರವು ಕುಂಭ ರಾಶಿಯಲ್ಲಿ ಸಂಭವಿಸಲಿದೆ, ಶಿಕ್ಷಣದ ದೃಷ್ಟಿಕೋನದಿಂದ ಇದು ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ಯಾವುದೇ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ನಿರಾಶೆಗೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ವರ್ಷ ಕಳೆದಂತೆ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ ಎಂದು ಸಾಬೀತುಪಡಿಸಬಹುದು. ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಮಿಥುನ ರಾಶಿಚಕ್ರವೂ ಸ್ಥಳೀರಿಗೆ ಸೆಪ್ಟೆಂಬರ್ ರಿಂದ ವರ್ಷದ ಅಂತ್ಯದ ವರೆಗಿನ ಸಮಯವು ಉತ್ತಮವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಶಿಕ್ಷಣದ ದೃಷ್ಟಿಯಿಂದ ನಿಮ್ಮ ಅದೃಷ್ಟ ಹೆಚ್ಚುತ್ತದೆ. ಈ ಸಮಯದಲ್ಲಿ ನೀವು ಶಿಕ್ಷಣದ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಏಕೆಂದ್ರೆ ಸ್ಪರ್ಧೆಯ ಮನೆಯ ಅಧಿಪತಿ ಮನಗಳ ನಿಮ್ಮ ಸ್ಪರ್ಧೆಯ ಮನೆಯ ಮೇಲೆ ಸಂಪೂರ್ಣ ದೃಷ್ಟಿ ಹಾಕುತ್ತಾರೆ. ಮತ್ತು ರಾಶಿಯ ಲಗ್ನದ ಮನೆಗೆ ಸಾಗುತ್ತಾರೆ. ಪರಿಣಾಮವಾಗಿ ಇದು ವಿದ್ಯಾರ್ಥಿಗಳನ್ನು ತಮ್ಮ ಅಧ್ಯಯನದ ಬಗ್ಗೆ ಆಕ್ರಮಣಕಾರಿ ಮತ್ತು ಉತ್ಸಾಹಭರಿತನ್ನಾಗಿ ಮಾಡಲು ಕೆಲಸ ಮಾಡುತ್ತದೆ.

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನ :

ಮಿಥುನ ರಾಶಿಚಕ್ರದ ಸ್ಥಳೀಯರಿಗೆ 2022 ವರ್ಷವು ಕುಟುಂಬ ಜೀವನದ ದೃಷ್ಟಿಕೋನದಿಂದ ಮಿಶ್ರ ವರ್ಷವೆಂದು ಸಾಬೀತುಪಡಿಸುತ್ತದೆ. ವರ್ಷದ ಆರಂಭದಲ್ಲಿ ಗುರು ಗ್ರಹದ ದೃಷ್ಟಿಯು ನಿಮ್ಮ ಎರಡನೇ ಮನೆಯ ಮೇಲೆ ಬೀಳುತ್ತದೆ. ಗುರು ಗ್ರಹದ ದೃಷ್ಟಿಯು ನಿಮ್ಮ ಕೌಟುಂಬಿಕ ಸಂತೋಷವನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ ನಿಮ್ಮ ಮನೆಯ ವಾತಾವರಣವು ಸಂತೋಷ ಮತ್ತು ಶಾಂತಿಯಿಂದಿರುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಮೇ ರಿಂದ ಜೂನ್ ತಿಂಗಳುಗಳ ಸಮಯದಲ್ಲಿ ಮೂರು ಗ್ರಹಗಳು ಅಂದರೆ ಮಂಗಳ, ಶುಕ್ರ ಮತ್ತು ಗುರಿವಿನ ಸಂಯೋಜನೆ ರೂಪುಗೊಳ್ಳಲಿದೆ. ಈ ಸಮಯದಲ್ಲಿ ನಿಮ್ಮ ಮೇಲೆ ಕೆಲಸದ ಹೊರೆ ಹೆಚಾಬಹುದು. ಈ ಕಾರಣದಿಂದಾಗಿ ನಿಮ್ಮ ಕುಟುಂಬಕ್ಕೆ ಕಡಿಮೆ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುತ್ತದೆ.

ಆದಾಗ್ಯೂ, ಆಗಸ್ಟ್ ರಿಂದ ನವೆಂಬರ್ ವರೆಗಿನ ಸಮಯವು, ಕುಟುಂಬ ಜೀವನದ ದೃಷ್ಟಿಕೋನದಿಂದ ನಿಮಗೆ ಉತ್ತಮವಾಗಿರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಹೊಸ ಮನೆಯನ್ನು ಖರೀದಿಸಬಹುದು, ಏಕೆಂದ್ರೆ ಮಂಗಳ ದೇವ ನಿಮ್ಮ ಪ್ರಯತ್ನಗಳ ಮತ್ತು ಸಂಪತ್ತಿನ ಮನೆಯ ಮೇಲೆ ದೃಷ್ಟಿ ನೀಡುತ್ತಾರೆ. ಈ ಕಾರಣದಿಂದಾಗಿ ಮನೆಯಲ್ಲಿ ಸಂತೋಷದ ಸಂವಹನ ಇರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ವರ್ಷದ ಅಂತ್ಯದ ತಿಂಗಳುಗಳಲ್ಲಿ ನಿಮ್ಮ ಕುಟುಂಬದೊಂದಿಗೆ ನೀವು ಎಲ್ಲಾದರೂ ಪ್ರಯಾಣಕ್ಕೆ ಹೋಗಬಹುದು. ಏಕೆಂದರೆ ಕುಟುಂಬದ ಮನೆಯ ಅಧಿಪತಿ ಬುಧ ದೇವ ತನ್ನ ಸಂಚಾರದ ಮೂಲಕ ನಿಮ್ಮ ರಾಶಿಚಕ್ರದ ಪ್ರಯಾಣದ ಏಳನೇ ಮನೆಯಲ್ಲಿರುತ್ತಾರೆ. ಈ ಸಮಯದಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ಮತ್ತು ಕುಟುಂಬದೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಉತ್ತಮಗೊಳ್ಳಬಹುದು. ಈ ವರ್ಷ ನೆನಪಿನಲ್ಲಿಡಬೇಕಾದ ವಿಷಯವೆಂದರೆ, ಕುಟುಂಬದ ಸದಸ್ಯರೊಂದಿಗೆ ಮಾತನಾಡುವಾಗಲೆಲ್ಲಾ ವಿಷಯಗಳನ್ನು ತಿರುಚಿತ ರೀತಿಯಲ್ಲಿ ಪ್ರಸ್ತುತಪಡಿಸಬೇಡಿ. ಸ್ಪಷ್ಟವಾಗಿ ಮಾತನಾಡಲು ಪ್ರಯತ್ನ್ನಿಸಿ.

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ವೈವಾಹಿಕ ಜೀವನ :

ಮಿಥುನ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗಬಹುದು. ವರ್ಷದ ಆರಂಭವು ಉತ್ತಮವಾಗಿರುವ ಸಾಧ್ಯತೆ ಇದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಮದುವೆಯ ಏಳನೇ ಮನೆಯ ಅಧಿಪತಿ ರಾಶಿಚಕ್ರದ ಅದೃಷ್ಟ ಮತ್ತು ಕರ್ಮದ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಜನವರಿ ತಿಂಗಳಲ್ಲಿ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಶಕ್ತಿಯುತ ಮತ್ತು ಸಿಹಿಯಾಗಿರುತ್ತದೆ. ಈ ಸಮಯದಲ್ಲಿ ಜೀವನ ಸಂಗಾತಿಯ ಮೂಲಕ ಯಾವುದೇ ರೀತಿಯ ಲಾಭವನ್ನು ಪಡೆಯುವ ಸಾಧ್ಯತೆ ಇದೆ.

17 ಏಪ್ರಿಲ್ ರಿಂದ ಜೂನ್ ಮಧ್ಯ ಮೂರು ಗ್ರಹಗಳು ಅಂದರೆ ಮಂಗಳ, ಶುಕ್ರ ಮತ್ತು ಗುರುವಿನ ಸಂಯೋಜನೆಯು ವೈವಾಹಿಕ ದೃಷ್ಟಿಕೋನದಿಂದ ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಕೆಟ್ಟದ್ದಾಗಿರಬಹುದು. ಈ ಅವಧಿಯಲ್ಲಿ ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ಜಗಳವಾಗಬಹದು ಮತ್ತು ನೀವು ಇಬ್ಬರೂ ತಪ್ಪು ಗ್ರಹಿಕೆಗಳಿಗೆ ಬಲಿಯಾಗಬಹುದು. ಈ ಕಾರನಾಡಿದ್ನಾಗಿ ಸಂಬಂಧದಲ್ಲಿ ಒತ್ತಡ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಜೂಲೈ ರಿಂದ ಆಗಸ್ಟ್ ವರೆಗಿನ ಸಮಯದಲ್ಲಿ ಮಕ್ಕಳ ಕಡೆಯ ಅದೃಷ್ಟವನ್ನು ನಿರೀಕ್ಷಿಸಲಾಗಿದೆ. ಈ ತಿಂಗಳುಗಳಲ್ಲಿ ಮಕ್ಕಳ ಕಡೆಯಿಂದ ಪ್ರಗತಿಯ ಸಾಧ್ಯತೆ ಇದೆ. ಇದರಿಂದಾಗಿ ಕುಟುಂಬ ಜೀವನವು ಸಂತೋಷವಾಗಿರುತ್ತದೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಈ ವರ್ಷದ ಅಂತ್ಯದ ಕೆಲವು ತಿಂಗಳುಗಳು ನಿಮ್ಮ ಕುಟುಂಬ ಜೀವನದ ದೃಷ್ಟಿಕೋನದಿಂದ ತುಂಬಾ ಅನುಕೂಲಕರವಾಗಿರುತ್ತವೆ. ಈ ಸಮಯದಲ್ಲಿ ಕುಟುಂಬದೊಂದಿಗೆ ನೀವು ಎಲ್ಲಾದರೆ ಸುತ್ತಾಡಲು ಹೋಗಬಹುದು. ನಿಕಟತೆ ಹೆಚ್ಚಾಗುತ್ತದೆ ಮತ್ತು ಕುಟುಂಬದೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ.

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ಪ್ರೀತಿಯ ಜೀವನ :

ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ಮಿಥುನ ರಾಶಿಚಕ್ರದ ಸ್ಥಳೀಯರ ಪ್ರೀತಿಯ ಜೇವನವು ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವರ್ಷದ ಆರಂಭದಲ್ಲೇ ನಿಮ್ಮ ಪ್ರೇಮಿಯ ಬೆಂಬಲವನ್ನು ನೀವು ಪಡೆಯುವುದನ್ನು ಕಾಣಲಾಗುತ್ತಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಪ್ರೀತಿ ಮತ್ತು ಪ್ರಣಯದ ಅಧಿಪತಿ ಶುಕ್ರ ದೇವರ ಸಂಚಾರವು ನಿಮ್ಮ ರಾಶಿಯ ಪಾಲುದಾರಿಕೆಯ ಏಳನೇ ಮನೆಯಲ್ಲಿರುತ್ತದೆ. ಈ ಕಾರಣದಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರಬಹುದು. ಮತ್ತೊಂದೆಡೆ, ಏಪ್ರಿಲ್ ತಿಂಗಳ ನಂತರ ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ಶಕ್ತಿ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರೀತಿಯ ಜೀವನದಲ್ಲಿ ಪ್ರಣಯ ಹೆಚ್ಚಾಗುತ್ತದೆ ಮತ್ತು ನಿಮ್ಮ ಸಂಬಂಧವು ಸುಧಾರಿಸುತ್ತದೆ. ಈ ಅವಧಿಯಲ್ಲಿ ಶುಕ್ರ ಅತ್ಯಂತ ಅನುಕೂಲಕರ ಸ್ಥಾನದಲ್ಲಿರುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಪ್ರೇಮಿಯೊಂದಿಗೆ ಮದುವೆಯಾಗಲು ಸಹ ನೀವು ಪರಿಗಣಿಸಬಹುದು.

ಏಪ್ರಿಲ್ ತಿಂಗಳಲ್ಲಿ ಗುರು ಗ್ರಹದ ಸಂಚಾರವು ಪ್ರೀತಿಯ ಜೀವನದಲ್ಲಿ ಇನ್ನಷ್ಟು ಶುಭ ಬದಲಾವಣೆಗಳನ್ನು ತರಬಹುದು. ಈ ಸಮಯದಲ್ಲಿ ಪ್ರೀತಿಯ ಮದುವೆಯ ಪ್ರಬಲ ಸಾಧ್ಯತೆ ಕಂಡುಬರುತ್ತಿದೆ. ಏಕಾಂಗಿ ಜೀವನವನ್ನು ಕಳೆಯುತ್ತಿರುವ ಅಥವಾ ಯಾರನ್ನಾದರೂ ಪ್ರಸ್ತಾಪಿಸಲು ಯೋಚಿಸುತ್ತಿರುವ ಜನರಿಗೆ ವರ್ಷ 2022 ರಲ್ಲಿ ಮೇ ರಿಂದ ಜೂಲೈ ವರೆಗಿನ ಸಮಯವು ಉತ್ತಮವೆಂದು ಸಾಬೀತುಪಡಿಸಬಹುದು. ಏಕೆಂದರೆ ಸಂವಹನ ಮತ್ತು ಸಂವಾದದ ಅಧಿಪತಿ ಗ್ರಹ ಬುಧ ದೇವ ಈ ಸಮಯದಲ್ಲಿ ನಿಮ್ಮ ಲಗ್ನದ ಮನೆ ಅಂದರೆ ನಿಮ್ಮ ಮೊದಲನೇ ಮನೆಗೆ ಸಾಗುತ್ತಾರೆ. ಈ ಸಮಯದಲ್ಲಿ ಮಿಥುನ ರಾಶಿಚಕ್ರದ ಜನರು ಪ್ರೀತಿಯ ಜೀವನದಲ್ಲಿ ಯಶಸ್ಸು ಪಡೆಯುವ ಮತ್ತು ಹೊಸ ಸಂಗಾತಿಯನ್ನು ಪಡೆಯುವ ಸಾಧ್ಯತೆ ಉಂಟಾಗುತ್ತಿದೆ. ವರ್ಷದ ಅಂತ್ಯದ ಕೆಲವು ತಿಂಗಳುಗಳಲ್ಲಿ ಪ್ರೀತಿಯ ಜೀವನದತ್ತ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರ ಮಾತುಗಳನ್ನು ನೀವು ಎಚ್ಚರಿಕೆಯಿಂದ ಕೇಳಲು ಪ್ರಯತ್ನಿಸಬೇಕು. ಫೋನ್ ಮೂಲಕ ಪ್ರೇಮಿಗೆ ಹೆಚ್ಚು ಸಮಯ ನೀಡಲು ಪ್ರಯತ್ನಿಸಿ.

ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ

ಪರಿಹಾರ - ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ ಜ್ಯೋತಿಷ್ಯ ಪರಿಹಾರ ಕ್ರಮಗಳು :

  • ಗಣೇಶ ದೇವರನ್ನು ಪೂಜಿಸಿದ ನಂತರ ನಾಲ್ಕು ಮುಖಿ ರುದ್ರಾಕ್ಷವನ್ನು ಧರಿಸಿ.
  • ಪ್ರತಿ ಶನಿವಾರ ಹಸುವಿಗೆ ಬೆಲ್ಲ ಮತ್ತು ರೊಟ್ಟಿಯನ್ನು ತಿನ್ನಿಸಿ.
  • ವಿಶೇಷವಾಗಿ ಪ್ರತಿ ಬುಧವಾರದಂದು ಹಸಿರು ಬಣ್ಣದ ವಸ್ತುಗಳ ದಾನ ಮಾಡಿ.
  • ಬುಧ ಬೀಜ ಮಂತ್ರವನ್ನು ಜಪಿಸಿ.

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವನ್ನು ನೀವು ಇಷ್ಟಪಟ್ಟಿರಬೇಕು ಎಂದು ನಾವು ಭಾವಿಸುತ್ತೇವೆ. ಅಂತಹ ಹೆಚ್ಚಿನ ಲೇಖನಗಳಿಗಾಗಿ ಆಸ್ಟ್ರೋಸೇಜ್‌ನೊಂದಿಗೆ ಟ್ಯೂನ್ ಮಾಡಿ. ಧನ್ಯವಾದಗಳು!

More from the section: Horoscope 3291
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2023
© Copyright 2024 AstroCAMP.com All Rights Reserved