• Talk To Astrologers
  • Brihat Horoscope
  • Ask A Question
  • Child Report 2022
  • Raj Yoga Report
  • Career Counseling
Personalized
Horoscope

ವೃಷಭ ರಾಶಿ ಭವಿಷ್ಯ 2022 - Taurus Yearly Horoscope 2022 in Kannada

Author: -- | Last Updated: Fri 27 Aug 2021 10:32:05 AM

ಹೊಸ ವರ್ಷ ಎಂದರೆ ಜೀವನದಲ್ಲಿ ಹೊಸ ಯೋಜನೆಗಳು ಮತ್ತು ಹೊಸ ಕನಸುಗಳು. ಈ ಹೊಸ ಕನಸುಗಳು ಮತ್ತು ಯೋಜನೆಗಳು ತಮ್ಮೊಂದಿಗೆ ಅನೇಕ ಪ್ರಶ್ನೆಗಳನ್ನು ತರುತ್ತವೆ. ಪ್ರಶ್ನೆಯೆಂದರೆ, ವರ್ಷ 2022 ರಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನ ಹೇಗಿರುತ್ತದೆ? ಅಥವಾ ವೃಷಭ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022, ಶಿಕ್ಷಣದ ದೃಷ್ಟಿಯಿಂದ ಹೇಗಿರುತ್ತದೆ? ಎಂಬುವಂತಹ ಪ್ರಶ್ನೆಗಳು ಅಥವಾ ಕಳೆದ ವರ್ಷವನ್ನು ನೋಡಿದರೆ, 2022 ರಲ್ಲಿ ವೃಷಭ ರಾಶಿಚಕ್ರದ ಜನರ ಆರೋಗ್ಯವು ಹೇಗಿರುತ್ತದೆ ಎಂಬ ಪ್ರಶ್ನೆಯೂ ಕೆಲವು ಜನರ ಮನಸ್ಸಿನಲ್ಲಿ ಬರಬಹುದು. ಹಾಗಿದ್ದರೆ ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. 2022 ರಲ್ಲಿ ವೃಷಭ ರಾಶಿ ಭವಿಷ್ಯದ ಪ್ರಕಾರ ನಿಮ್ಮ ಜೀವನದಲ್ಲಿ ಆಗಲಿರುವ ಎಲ್ಲವನ್ನೂ ಹೇಳಲು ಇಂದು ನಾವು ಇಲ್ಲಿದ್ದೇವೆ.

Taurus Horoscope 2022 In Kannada

ವೃಷಭ ರಾಶಿಚಕ್ರದ ಸ್ಥಳೀಯ್ರಿಗೆ ವರ್ಷ 2022 ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತಾಗಬಹುದು. ಕುಟುಂಬ, ಅರೋಗ್ಯ ಮತ್ತು ಪ್ರೀತಿಯ ಜೀವನದ ದೃಷ್ಟಿಯಿಂದ ಈ ವರ್ಷ ನಿಮಗೆ ಸಾಮಾನ್ಯ ಫಲಿತಾಂಶಗಳನ್ನು ನೀಡಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ವೃತ್ತಿಪರ ಕ್ಷೇತ್ರದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಹೊಸ ಎತ್ತರವನ್ನು ಸಾಧಿಸುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ಕೆಲಸದ ಸ್ಥಳದ ಮನೆಯ ಅಧಿಪತಿ ಶನಿ ದೇವ, ವರ್ಷದುದ್ದಕ್ಕೂ ನಿಮ್ಮ ರಾಶಿಯಲ್ಲಿ ಉತ್ತಮ ಸ್ಥಾನದಲ್ಲಿರುತ್ತಾರೆ. `ಅಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿ ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಅಥವಾ ಹೊಸ ವ್ಯವಹಾರಕ್ಕಾಗಿ ಯೋಜನೆ ರೂಪಿಸುತ್ತಿರುವವರಿಗೆ ಈ ವರ್ಷ ಯಶಸ್ಸು ಕೈಗೊಳ್ಳಬಹುದು. ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳೊಂದಿಗಿನ ವ್ಯವಹಾರ ಸಂಬಂಧಗಳು ಬಲಗೊಳ್ಳುವ ಸಾಧ್ಯತೆ ಇದೆ. ಈ ವರ್ಷ ನಿಮ್ಮ ಕೆಲಸದಿಂದ ನೀವು ಸಮಾಜದಲ್ಲಿ ಗೌರವವನ್ನು ಗಳಿಸಬಹುದು.

ಮತ್ತೊಂದೆಡೆ, ಶಿಕ್ಷಣದ ದೃಷ್ಟಿಯಿಂದ ಈ ವರ್ಷವು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ವರ್ಷವಿಡೀ ಶಿಕ್ಷಣದ ಕ್ಷೇತ್ರದಲ್ಲಿ ನೀವು ಶುಭ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಿರುವವರು ಅಥವಾ ಪ್ರಸ್ತುತ ಸಮಯದಲ್ಲಿ ವಿದೇಶದಲ್ಲಿ ಶಿಕ್ಷಣವನ್ನು ಪಡೆಯುತ್ತಿರುವವರು ಸಹ ಈ ವರ್ಷ ಅತ್ಯಂತ ಶುಭ ಪಫಲಿತಾಂಶಗಳನ್ನು ಪಡೆಯಬಹುದು.

ವೃಷಭ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022, ಆರ್ಥಿಕ ದೃಷ್ಟಿಕೋನದಿಂದ ಸಾಮಾನ್ಯ ಫಲಪ್ರದವಾಗುವ ಸಾಧ್ಯತೆ ಇದೆ. ಏಪ್ರಿಲ್ ಮಧ್ಯದಲ್ಲಿ ಅನಿಶ್ಚಿತತೆಗಳ ಎಂಟನೇ ಮನೆಯ ಅಧಿಪತಿ ಗುರುವಿನ ಸಂಚಾರವು ನಿಮ್ಮ ರಾಶಿಚಕ್ರದ ಲಾಭ ಮತ್ತು ಪ್ರಯೋಜನದ ಮನೆಯಲ್ಲಿರುವುದರಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಈ ಸಮಯದಲ್ಲಿ ನೀವು ನಿಮ್ಮ ಆರ್ಥಿಕ ಪರಿಸ್ಥಿತಿಯತ್ತ ವಿಶೇಷ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡುವುದನ್ನೂ ತಪ್ಪಿಸಬೇಕು.

16 ಜನವರಿ ರಂದು ಮಂಗಳ ಗ್ರಹದ ಸಂಚಾರವು ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿರುವ ಕಾರಣದಿಂದಾಗಿ ವಿಶೇಷವಾಗಿ ಪಿ ಹೆಚ್ ಡಿ, ತತ್ವಶಾಸ್ತ್ರ ಅಥವಾ ಸಂಶೋಧನಾ ವಿಷಯಗಳ ಅಧ್ಯಯನ ಮಾಡುತ್ತಿರುವ ಜನರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಂಚಾರದ ಆರಂಭದ ತಿಂಗಳುಗಳಲ್ಲಿ ನಿಮ್ಮ ಅದೃಷ್ಟವನ್ನು ಬಲಪಡಿಸುತ್ತದೆ. ಇದರೊಂದಿಗೆ 13 ಏಪ್ರಿಲ್ ರಿಂದ ಗುರು ಗ್ರಹವು ಸಂಚಾರದ ಮೂಲಕ ನಿಮ್ಮದೇ ರಾಶಿ ಅಂದರೆ ಮೀನಾ ರಾಶಿಯಲ್ಲಿ ಕುಳಿತುಕೊಳ್ಳಲಿದೆ. ಇದು ನಿಮ್ಮ ಲಾಭದ ಹನ್ನೊಂದನೇ ಮನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ವಿದೇಶದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಅಥವಾ ವಿದೇಶದಲ್ಲಿ ಶಿಕ್ಷಣವನ್ನು ಪಡೆಯಲು ಪ್ರಯತ್ನಿಸುತ್ತಿರುವ ಜನರಿಗೆ ವಿಶೇಷ ಫಲಿತಾಂಶಗಳು ಸಿಗುತ್ತವೆ. ಗುರು ಸಂಚಾರದ ಸಮಯದಲ್ಲಿ, ದೀರ್ಘಕಾಲದಿಂದ ಯಾವುದೇ ಕಾರಣದಿಂದ ಸಿಲುಕಿಕೊಂಡಿರುವ ಕೆಲಸಗಳು ಮುಂದುವರಿಯುವ ಸಾಧ್ಯತೆ ಇದೆ. ಈ ವರ್ಷ ವೃಷಭ ರಾಶಿಚಕ್ರದ ಸ್ಥಳೀಯರ ಜೀವನದಲ್ಲಿ ಪ್ರೀತಿಪಾತ್ರರು ಅಥವಾ ಜೀವನ ಸಂಗಾತಿಯನ್ನು ಪಡೆಯುವ ಸಾಧ್ಯತೆಯಿದೆ.

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ಆರ್ಥಿಕ ಜೀವನ

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ಆರ್ಥಿಕ ದೃಷ್ಟಿಕೋನದಿಂದ ಈ ವರ್ಷ ನಿಮಗೆ ಸಾಮಾನ್ಯವಾಗಿರಲಿದೆ. ಆದರೆ ಹತ್ತನೇ ಮನೆಯಲ್ಲಿ ಶನಿ ದೇವರು ಮತ್ತು ಹತ್ತನೇ ಮನೆಯನ್ನು ಕರ್ಮದ ಮನೆಯೆಂದು ಸಹ ಹೇಳಲಾಗುತ್ತದೆ. ಈ ಕಾರಣದಿಂದಾಗಿ ಶನಿ ದೇವ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಆದಾಯದ ಹೊಸ ಮೂಲಗಳ ದಾರಿಯನ್ನು ತೆರೆಯುತ್ತಾರೆ. ಆದಾಗ್ಯೂ, ವರ್ಷದ ಆರಂಭದಲ್ಲಿ ವ್ಯಕ್ತಿಯ ಆದಾಯ ಮತ್ತು ಖರ್ಚು ಸಮಾನ ಓಟದಲ್ಲಿ ಇರುವ ಸಾಧ್ಯತೆ ಇದೆ. ಅಂದರೆ ಎಷ್ಟು ಆದಾಯವಿರುತ್ತದೋ ಅಷ್ಟೇ ವೆಚ್ಚವೂ ಇರುತ್ತದೆ. ಆದರೆ 13 ಏಪ್ರಿಲ್ ನಂತರ ನಿಮ್ಮ ಆದಾಯದ ಮನೆಯಲ್ಲಿ ಗುರುವಿನ ಸಂಚಾರವು, ಸಾಕಷ್ಟು ಮಟ್ಟಿಗೆ ಪರಿಸ್ಥಿತಿಯನ್ನು ಬದಲಾಯಿಸಬಹುದು. ಈ ಸಮಯದಲ್ಲಿ ಹಣಕಾಸು ಸಂಗ್ರಹಿಸುವ ಸಾಧ್ಯತೆಯೂ ಇದೆ. ಆದರೆ ನೀವು ಹೂಡಿಕೆ ಮಾಡಲು ಅಥವಾ ಯಾರಿಗಾದರೂ ಸಾಲವಾಗಿ ಹಣ ನೀಡಲು ಬಯಸುತ್ತಿದ್ದರೆ, ಅದನ್ನು ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ನೀವು ದೊಡ್ಡ ಹಾನಿಯನ್ನು ಅನುಭವಿಸಬೇಕಾಗಬಹುದು. ಏಕೆಂದರೆ ಗುರುವು ನಿಮ್ಮ ಅನಿಶ್ಚಿತತೆ ಮತ್ತು ಹಾನಿಯ ಮನೆಯ ಅಧಿಪತಿ.

ಆಗಸ್ಟ್ ತಿಂಗಳ ಸಮಯದಲ್ಲಿ ಸೂರ್ಯ ಮತ್ತು ಬುಧ ಗ್ರಹವು ಸಿಂಹ ರಾಶಿಯಲ್ಲಿ ಗೋಚರಿಸಲಿದೆ ಮತ್ತು ಅದೇ ಸಮಯದಲ್ಲಿ ಮಂತ್ತೊಂದೆಡೆ ಮಂಗಳ ಗ್ರಹವು ವೃಷಭ ರಾಶಿಯಲ್ಲಿ ಗೋಚರಿಸುತ್ತದೆ. ಗ್ರಹಗಳ ಈ ಪುನರ್ರಚನೆಯಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಅದೇ ಸಮಯದಲ್ಲಿ ಮತ್ತೊಂದೆಡೆ, ಏಪ್ರಿಲ್ ತಿಂಗಳಲ್ಲಿ ಗುರು ದೇವರು ಹನ್ನೊಂದನೇ ಮನೆಗೆ ಸಾಗುತ್ತಾರೆ. ಹನ್ನೊಂದನೇ ಮನೆಯನ್ನು ಲಾಭದ ಮನೆಯೆಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆಸೆಗಳನ್ನು ಪೂರೈಸಲು ನೀವು ಸಾಕಷ್ಟು ಹಣಕಾಸು ಖರ್ಚು ಮಾಡಬಹುದು. ಈ ಸಮಯದಲ್ಲಿ ನೀವು ಬಯಸಿದರೂ ಹಣವನ್ನು ಸಂಗ್ರಹಿಸಲು ಸಾಧ್ಯವಾಗದಿರುವಂತಹ ಪರಿಸ್ಥಿತಿಗಳನ್ನು ನೀವು ಹೊಂದಿರಬಹುದು. ಗುರುವಿನ ಈ ಸಂಚಾರದ ಕಾರಣದಿಂದಾಗಿ ಉಂಟಾಗುವ ಈ ಹೊಸ ಪರಿಸ್ಥಿತಿಯು ವರ್ಷದ ಅಂತ್ಯದವರೆಗೆ ಉಳಿದಿರಬಹುದು. ವರದ ಅಂತ್ಯದಲ್ಲಿ ಹೆಚ್ಚು ಖರ್ಚುಗಳ ಕಾರಣದಿಂದಾಗಿ ವೃಷಭ ರಾಶಿಚಕ್ರದ ಸ್ಥಳೀಯರ ಆರ್ಥಿಕ ಪರಿಸ್ಥಿತಿಯು ಸ್ವಲ್ಪ ದುರ್ಬಲವಾಗಿರಬಹುದು.

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ವ್ಯವಹಾರ ಜೀವನ:

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಸಂತೋಷದಿಂದ ತುಂಬಿರುತ್ತದೆ ಎಂದು ಸಾಬೀತುಪಡಿಸಬಹುದು. ಇಡೀ ವರ್ಷ ನಿಮಗೆ ಅನುಕೂಲಕರವಾಗಿದೆ. ಹೊಸ ಉದ್ಯೋಗ ಅಂದರೆ ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಈ ವಾರ ಉತ್ತಮವೆಂದು ಸಾಬೀತಾಗಬಹುದು. ಜನವರಿ ತಿಂಗಳ ಮಧ್ಯದಲ್ಲಿ ಮಂಗಳ ಗ್ರಹವು ಎಂಟನೇ ಮನೆಗೆ ಸಾಗುವುದರಿಂದಾಗಿ ವರ್ಷರ ಆರಂಭವು ನಿಮಗೆ ಶುಭ ಫಲಿತಾಂಶಗಳನ್ನು ನೀಡಬಹುದು. ಎಂಟನೇ ಮನೆಯನ್ನು ಗೌಪ್ಯತೆಯ ಮನೆಯೆಂದು ಕರೆಯಲಾಗುತ್ತದೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ನೀವು ಯಾವುದೇ ರೀತಿಯ ಗುಪ್ತ ಮೂಲಗಳಿಂದ ಲಾಭವನ್ನು ಪಡೆಯಬಹುದು.

ಅದೇ ಸಮಯದಲ್ಲಿ ಮತ್ತೊಂದೆಡೆ, ಏಪ್ರಿಲ್ ತಿಂಗಳಿಂದ ಗುರುವಿನ ಸಂಚಾರವು ಮೀನಾ ರಾಶಿಯಲ್ಲಿ ಅಂದರೆ ಹನ್ನೊಂದನೇ ಮನೆಯಲ್ಲಿ ಸಂಭವಿಸಲಿದೆ. ಹನ್ನೊಂದನೇ ಮನೆ ಲಾಭದ ಮನೆ. ಅಂತಹ ಸಂದರ್ಭದಲ್ಲಿ, ನಿಮ್ಮ ವ್ಯವಹಾರ ಸಂಬಂಧವು ಬಲವಾಗಿ ಬೆಳೆಯುವ ನಿರೀಕ್ಷೆಯಿದೆ. ಏಕೆಂದರೆ ಈ ಸಮಯದಲ್ಲಿ ಗುರುವಿನ ಸಾಗಣೆಯಿಂದಾಗಿ ನಿಮಗೆ ಹಣಕಾಸಿನ ಲಾಭವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ನೀವು ಉತ್ತಮ ಸಂಬಂಧವನ್ನು ಹೊಂದಿರಬಹುದು. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಆಗಸ್ಟ್ ರಿಂದ ಸೆಪ್ಟೆಂಬರ್ ನಡುವೆ ಸ್ಥಳೀಯರ ಕೆಲಸದ ಸ್ಥಳದಲ್ಲಿ ಅದೃಷ್ಟದ ಅನುಗ್ರಹವಿರುತ್ತದೆ. ಇದು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಪ್ರತಿಯೊಂದು ರೀತಿಯಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೆ ಸೆಪ್ಟೆಂಬರ್ ತಿಂಗಳಲ್ಲಿ ನಿಮ್ಮ ರಾಶಿಚಕ್ರದ ಆದಾಯದ ಮನೆಯ ಮೇಲೆ ಸೂರ್ಯ, ಶುಕ್ರನ ದೃಷ್ಟಿ ಮತ್ತು ಗುರುವಿನ ಉಪಸ್ಥಿತಿಯ ಪರಿಣಾಮವನ್ನು ಕಾಣಲಾಗುತ್ತದೆ.

ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವು ವೃಷಭ ರಾಶಿಚಕ್ರದ ಸ್ಥಳೀಯರಿಗೆ ವ್ಯಾಪಾರದೊಂದಿಗೆ ಹೊಸ ವ್ಯಾಪಾರವನ್ನು ಆರಂಭಿಸಲು ಸಹ ಉತ್ತಮವಾಗಿದೆ. ವರ್ಷ 2022 ರ ಅಂತ್ಯವು, ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಪ್ರತಿಯೊಂದು ದೃಷ್ಟಿಕೋನದಿಂದ ಉತ್ತಮವಾಗಿರಬಹುದು.

ವೃತ್ತಿ ಜೀವನ ತೊಂದರೆಗೀಡಾಗಿದೆಯೇ! ಈಗಲೇ ಆದೇಶಿಸಿ ಕಾಗ್ನಿ ಆಸ್ಟ್ರೋ ರಿಪೋರ್ಟ್

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ಶಿಕ್ಷಣ:

ವೃಷಭ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಶಿಕ್ಷಣದ ದೃಷ್ಟಿಕೋನದಿಂದ ಉತ್ತಮವಾಗಿರುವೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ವರ್ಷ ಬಹಳ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ಜನವರಿ ತಿಂಗಳ ಮಧ್ಯದಲ್ಲಿ, ಮಂಗಳ ಗ್ರಹವು ನಿಮ್ಮ ರಾಶಿಯ ಎಂಟನೇ ಮನೆಗೆ ಗೋಚರಿಸುತ್ತದೆ. ಈ ಕಾರಣದಿಂದಾಗಿ ಜೂನ್ ವರೆಗಿನ ಸಂಪೂರ್ಣ ಸಮಯವು ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ವೃಷಭ ರಾಶಿಚಕ್ರದ ಜನರು ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶಗಳನ್ನು ಪಡೆಯಬಹುದು.

17 ಏಪ್ರಿಲ್ ರಿಂದ ಸೆಪ್ಟೆಂಬರ್ ವರೆಗಿನ ಸಮಯವು ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಹನ್ನೊಂದನೇ ಮನೆಯಲ್ಲಿ ಗುರು ಗ್ರಹವು ಗೋಚರಿಸುತ್ತದ ಮತ್ತು ಅಲ್ಲಿಂದ ನಿಮ್ಮ ರಾಶಿಚಕ್ರದ ಶಿಕ್ಷಣದ ಐದನೇ ಮನೆಗೆ ದೃಷ್ಟಿ ನೀಡುತ್ತದೆ. ವಿಶೇಷವಾಗಿ ಹೊಸ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವ ಜನರು ಈ ಸಮಯದಲ್ಲಿ ಯಶಸ್ಸು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇದರೊಂದಿಗೆ ವಿಶೇಷವಾಗಿ ಆಗಸ್ಟ್ ರಿಂದ ಸೆಪ್ಟೆಂಬರ್ ವರೆಗಿನ ಎಲ್ಲಾ ಸಾಗಣೆಗಳ ಕಾರಣದಿಂದಾಗಿ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶಿಕ್ಷಣದ ದೃಷ್ಟಿಕೋನದಿಂದ ಅನುಕೂಲಕರವಾಗಲಿದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುದು ಮಾತ್ರವಲ್ಲದೆ, ಉತ್ತಮ ಅಂಕಗಳನ್ನು ಸಹ ಪಡೆಯಬಹುದು. ಈ ಸಮಯದಲ್ಲಿ ವೃಷಭ ರಾಶಿಚಕ್ರದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವ ಶುಭ ಸುದ್ಧಿಯನ್ನು ಪಡೆಯಬಹುದು. ವರ್ಷ 2022 ರ ಅಂತ್ಯದ ಎರಡು ತಿಂಗಳುಗಳು ಅಂದರೆ ನವೆಂಬರ್ ಮತ್ತು ಡಿಸೆಂಬರ್, ವೃಷಭ ರಾಶಿಚಕ್ರದ ಸ್ಥಳೀಯರಿಗೆ ಶುಭ ಫಲಿಮಾಶಗಳನ್ನು ನೀಡಲಿವೆ. ಏಕೆಂದರೆ ನಿಮ್ಮ ರಾಶಿಚಕ್ರದ ಐದನೇ ಮನೆಯ ಅಧಿಪತಿಯು, ತನ್ನ ಸಾರಿಗೆಯನ್ನು ಮಾಡಿದ ನಂತರ, ನಿಮ್ಮ ರಾಶಿಚಕ್ರದ ಸಂಶೋಧನಾ ಮನೆಯಲ್ಲಿ ನಂತರ ಜ್ಞಾನ ಮತ್ತು ಅದೃಷ್ಟದ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ನಿರೀಕ್ಷೆಗೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನ :

ವರ್ಷ 2022 ರಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರು ಕುಟುಂಬ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ.

ಏಪ್ರಿಲ್ ತಿಂಗಳ ಅಂತ್ಯದ ಹಂತದಲ್ಲಿ ಶನಿ ಗ್ರಹದ ಸಂಚಾರವು ನಿಮ್ಮ ಹತ್ತನೇ ಮನೆಯಲ್ಲಿ ಸಂಭವಿಸುತ್ತದೆ. ಈ ಕಾರಣದಿಂದಾಗಿ ನೀವು ಕೆಳಗಿನ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ತಂದೆಯೊಂದಿಗೆ ವಿವಾದದ ಸಾಧ್ಯತೆ ಇದೆ ಅಥವಾ ತಂದೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. ಈ ಕಾರಣದಿಂದಾಗಿ ಮನೆಯಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಆದರೆ ಇದರ ನಂತರ ಮೇ ರಿಂದ ಆಗಸ್ಟ್ ವರೆಗಿನ ಸಮಯದ ಮಧ್ಯೆ ನಿಮ್ಮ ಪೋಷಕರ ಆರೋಗ್ಯವು ಸುಧಾರಿಸುವ ಸಾಧ್ಯತೆ ಇದೆ. ಏಕೆಂದರೆ ನಿಮ್ಮ ದೇಶೀಯ ಸೌಕರ್ಯಗಳ ನಾಲ್ಕನೇ ಮನೆಯ ಅಧಿಪತಿ ಮತ್ತು ತಂದೆಯ ನೈಸರ್ಗಿಕ ಗ್ರಹ ಸೂರ್ಯ ದೇವರ ಸಂಚಾರವು ನಿಮ್ಮ ರಾಶಿಚಕ್ರದ ಅನುಕೂಲಕರ ಮನೆಯಲ್ಲಿರುತ್ತದೆ

ಮೇ ಮಧ್ಯದಿಂದ ಮೂರ ಗ್ರಹಗಳು ಅಂದರೆ ಮಂಗಳ, ಶುಕ್ರ ಮತ್ತು ಗುರು ಗ್ರಹಗಳು ಒಟ್ಟಾಗಿ ಸಂಯೋಜನೆ ಮಾಡುತ್ತವೆ. ಮುಂದಿನ ತಿಂಗಳುಗಳಲ್ಲಿ ಇದು ನಿಮಗೆ ಉತ್ತಮ ಫಲಿತಾಂಶವನ್ನು ನೀಡಬಹುದು. ಈ ಸಂಯೋಜನೆಯ ಕಾರಣದಿಂದಾಗಿ ಆಗಸ್ಟ್ ರಿಂದ ಸೆಪ್ಟೆಂಬರ್ ವರೆಗಿನ ತಿಂಗಳು ವಿಶೇಷ ಫಲಿತಾಂಶವನ್ನು ನೀಡುತ್ತವೆ. ಈ ತಿಂಗಳುಗಳಲ್ಲಿ ಕುಟುಂಬದ ಯಾವುದೇ ವೃದ್ಧರು ದೀರ್ಘಕಾಲದಿಂದ ನಡೆಯುತ್ತಿದ್ದ ಯಾವುದೇ ರೋಗದಿಂದ ಮುಕ್ತಿ ಪಡೆಯಬಹುದು. ಈ ಕಾರಣದಿಂದಾಗಿ ನಿಮ್ಮ ಮಾನಸಿಕ ಒತ್ತಡವು ಸಹ ಕಡಿಮೆಯಾಗುತ್ತದೆ. ಈ ವರ್ಷದ ಅಂತ್ಯದಲ್ಲಿ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಆಸೆಗಳನ್ನು ಈಡೇರಿಸಲು ನಿಮ್ಮ ಮೂಲಕ ಅತಿಯಾಗಿ ಹಣವನ್ನು ಖರ್ಚು ಮಾಡುವ ನೀರಿಕ್ಷೆಯಿದೆ. ಈ ಕಾರಣದಿಂದಾಗಿ ನಿಮ್ಮ ಮನೆಯ ಪರಿಸರವು ಹದಗೆಡಬಹುದು.

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ಅರೋಗ್ಯ ಜೀವನ:

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ, ವೃಷಭ ರಾಶಿಚಕ್ರದ ಸ್ಥಳೀಯರು ಈ ವರ್ಷ ಆರೋಗ್ಯದ ಕ್ಷೇತ್ರದಲ್ಲಿ ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದಾರೆ.

ಜನವರಿ ತಿಂಗಳಲ್ಲಿ ಹನ್ನೆರಡನೇ ಅಧಿಪತಿ ಮಂಗಳ ಗ್ರಹದ ಸಂಚಾರದಿಂದಾಗಿ ಈ ತಿಂಗಳು ಕೊನೆಗೊಳ್ಳುವುದರೊಂದಿಗೆ ಆರೋಗ್ಯದ ದೃಷ್ಟಿಕೋನದಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅಂದರೆ ಈ ಸಮಯದಲ್ಲಿ ಅರೋಗ್ಯ ಜೀವನವು ಉತ್ತಮವಾಗಿರುವ ಸಾಧ್ಯತೆ ಇದೆ. ಆದರೆ ಏಪ್ರಿಲ್ ರಿಂದ ಸೆಪ್ಟೆಂಬರ್ ಮಧ್ಯದ ಸಮಯವು ಆರೋಗ್ಯದ ದೃಷ್ಟಿಕೋನದಿಂದ ಹೆಚ್ಚು ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ವೃಷಭ ರಾಶಿಚಕ್ರದ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದೇ ಸಮಯದಲ್ಲಿ ಮತ್ತೊಂದೆಡೆ, ಮೇ ತಿಂಗಳ ಮಧ್ಯದಲ್ಲಿ ಮೂರು ಗ್ರಹಗಳು ಅಂದರೆ ಮಂಗಳ, ಶುಕ್ರ ಮತ್ತು ಗುರುವಿನ ಸಂಯೋಜನೆಯು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡಕ್ಕೆ ಬಲಿಯಾಗಬಹುದು. ಆದಾಗ್ಯೂ, ಮತ್ತೊಂದೆಡೆ ಮೇ ರಿಂದ ಆಗಸ್ಟ್ ವರೆಗಿನ ಸಮಯದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ಪೋಷಕರ ಆರೋಗ್ಯವು ಸುಧಾರಿಸುವ ಸಾಧ್ಯತೆ ಇದೆ. ಆದರೆ ಈ ವರ್ಷದ ಅಂತ್ಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣ ವಿಷಯಗಳನ್ನು ಸಹ ನೀವು ನಿರ್ಲಕ್ಷಿಸಬಾರದು.

ನಿಮ್ಮ ಜಾತಕದಲ್ಲಿ ಶುಭ ಯೋಗವಿದೆಯೇ ? ತಿಳಿಯಲು ಈಗಲೇ ಖರೀದಿಸಿ ಬೃಹತ್ ಕುಂಡಲಿ

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ಪ್ರೀತಿ ಜೀವನ :

ವರ್ಷ 2022, ವೃಷಭ ರಾಶಿಚಕ್ರದ ಸ್ಥಳೀಯರ ಪ್ರೀತಿಯ ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ ಎಂದು ಸಾಬೀತುಪಡಿಸಬಹುದು. ಈ ವರ್ಷದ ಆರಂಭದಲ್ಲಿ ಐದನೇ ಮನೆಯ ಅಂದರೆ ಮಕ್ಕಳು ಮತ್ತು ಶಿಕ್ಷಣದ ಮನೆಯ ಅಧಿಪತಿ ಬುಧ ದೇವ ಒಂಬತ್ತನೇ ಮನೆ ಅಂದರೆ ಅದೃಷ್ಟದ ಮನೆಗೆ ಗೋಚರಿಸುತ್ತಾರೆ. ಈ ಕಾರಣದಿಂದಾಗಿ ವರ್ಷದ ಆರಂಭದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರ ಪ್ರೀತಿಯ ಜೀವನವು ಉತ್ತಮವಾಗಿರಬಹುದು. 17 ಏಪ್ರಿಲ್ ರಿಂದ 19 ಜೂನ್ ವರೆಗಿನ ಸಮಯವೂ ವೃಷಭ ರಾಶಿಚಕ್ರದ ಸ್ಥಳೀಯರಿಗೆ ವಿಶೇಷವಾಗಿರಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರೀತಿಯ ಮನೆಯ ಅಧಿಪತಿ ಬುಧ ದೇವರ ಸ್ಥಾನವು ನಿಮ್ಮ ಲಗ್ನದ ಮನೆಯಲ್ಲಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೊಸ ಪ್ರೀತಿಯ ಸಂಬಂಧದ ಸಾಧ್ಯತೆಗಳಿವೆ. ವಿಶೇಷವಾಗಿ ಈ ಹೊಸ ವರ್ಷ ಯಾರಿಗಾದರೂ ಪ್ರೊಪೋಸ್ ಮಾಡಲು ಯೋಚಿಸುತ್ತಿದ್ದರೆ, ಅದಕ್ಕಾಗಿ ಇದು ಅತ್ಯಂತ ಸೂಕ್ತ ಸಮಯ ಇರಬಹುದು.

ಸೆಪ್ಟೆಂಬರ್ ರಿಂದ ನವೆಂಬರ್ ನಡುವಿನ ಸಮಯವು ನಿಮ್ಮ ಪ್ರೀತಿಯ ಸಂಬಂಧದ ದೃಷ್ಟಿಕೋನದಿಂದ ನಿಮಗೆ ಮಿಶ್ರವಾಗಿರಲಿದೆ. ಏಕೆಂದರೆ ಈ ಸಮಯದ ಆರಂಭದಲ್ಲಿ ಮಂಗಳ ಗ್ರಹದ ಸ್ಥಾನವು ನಿಮ್ಮ ಲಗ್ನದ ಮನೆಯಲ್ಲಿರುತ್ತದೆ ಮತ್ತು ನಿಮ್ಮ ಎರಡನೇ ಮನೆಗೆ ಹಾದುಹೋಗುತಾರೆ. ಅಲ್ಲಿ ನಿಮ್ಮ ಪ್ರೀತಿಯ ಐದನೇ ಮನೆಯ ಮೇಲೆ ನಕಾರಾತ್ಮಕವಾಗಿ ದೃಷ್ಟಿ ನೀಡುತ್ತಾರೆ. ಈ ಸಮಯದಲ್ಲಿ ನೀವು ಪರಸ್ಪರ ನಿಕಟ ಬರುತ್ತಿರಿ ಆದರೆ ಈ ಸಮಯದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ವಿಷಯಗಳ ಬಗ್ಗೆ ವಿವಾದ ಉಂಟಾಗದಿರಲು ನೀವು ಪ್ರಯತ್ನಿಸಬೇಕು. ತಾಳ್ಮೆಯಿಂದ ಜೀವನ ಸಂಗಾತಿಯ ಮಾತುಗಳನ್ನು ಕೇಳಿ, ಅರ್ಥಮಾಡಿಕೊಳ್ಳಿ ಮತ್ತು ವಿವರಿಸಲು ಪ್ರಯತ್ನಿಸಿ. ವರ್ಷ 2022 ರ ತಿಂಗಳು ಅಂದರೆ ಡಿಸೆಂಬರ್ ತಿಂಗಳು ನಿಮ್ಮ ಪ್ರೀತಿಯ ಜೀವನಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ ಸಾಬೀತುಪಡಿಸಬಹುದು. ಏಕೆಂದರೆ ನಿಮ್ಮ ಪ್ರಣಯದ ಮನೆಯ ಅಧಿಪತಿ ಬುಧ ದೇವ ಈ ಸಮಯದಲ್ಲಿ ನಿಮ್ಮ ಆಳ ಮತ್ತು ಬಯಕೆಗಳ ಮನೆಯಲ್ಲಿ ಕುಳಿತಿರುತ್ತಾರೆ. ನಿಮ್ಮ ಪ್ರೀತಿಯ ಜೇವನದಲ್ಲಿ ಇದು ಪ್ರಣಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಪ್ರೀತಿಯ ಜೀವನವು ಆಹ್ಲಾದಕರವಾಗಿರುತ್ತದೆ ಮತ್ತು ನೀವು ಒಟ್ಟಿಗೆ ಸಾಕಷ್ಟು ಸಮಯವನ್ನು ಕಳೆಯಬಹದು.

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ವೈವಾಹಿಕ ಜೀವನ :

ಈ ವರ್ಷ ನಿಮಗೆ ವೈವಾಹಿಕ ದೃಷ್ಟಿಕೋನದಿಂದ ಮಿಶ್ರ ಫಲಿತಾಂಶಗಳನ್ನು ನೀಡಲಿದೆ ಎಂದು ಸಾಬೀತುಪಡಿಸಬಹುದು. ವೃಷಭ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷದ ಆರಂಭವು ವೈವಾಹಿಕ ಜೀವನದ ದೃಷ್ಟಿಕೋನದಿಂದ ಉತ್ತಮವಿರುವ ಸಾಧ್ಯತೆ ಇದೆ, ಏಕೆಂದರೆ ನಿಮ್ಮ ವಿವಾಹದ ಮನೆಯ ಅಧಿಪತಿ ಮಂಗಳ ದೇವ, ನಿಮ್ಮ ರಾಶಿಚಕ್ರದ ಎಂಟನೇ ಮನೆಯಲ್ಲಿರುತ್ತಾರೆ. ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನವು ಸಂತೋಷ ಮತ್ತು ಶಾಂತಿಯಿಂದ ತುಂಬಿರಬಹುದು. ಮತ್ತೊಂದೊಡೆ 21 ಏಪ್ರಿಲ್ ನಂತರ ನಿಮ್ಮ ವೈವಾಹಿಕ ಜೀವನವು ಇನ್ನಷ್ಟು ಉತ್ತಮವಾಗಬಹುದು. ಏಕೆಂದರೆ ಈ ಸಮಯದಲ್ಲಿ ನಿಮ್ಮ ರಾಶಿಯ ಮೇಲೆ ಗುರುವಿನ ಸಂಪೂರ್ಣ ಅನುಗ್ರಹವಿರುತ್ತದೆ. ಇದರೊಂದಿಗೆ ನಿಮ್ಮ ಏಳನೇ ಮನೆಯ ಅಧಿಪತಿಯನ್ನು ಮದುವೆಯ ಮನೆಯಲ್ಲಿ ಸಂಪೂರ್ಣವಾಗಿ ನೀಡುತ್ತಾರೆ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಒಂದು ರೀತಿಯ ಹೊಸತನವನ್ನು ನೋಡಬಹುದು. ಈ ಹೊಸತನದಿಂದ ನೀವು ಇಬ್ಬರೂ ಸಂಬಂಧದಲ್ಲಿ ಹೊಸ ಶಕ್ತಿಯನ್ನು ಹೊಂದುವ ಸಾಧ್ಯತೆ ಇದೆ, ಇದು ನಿಮ್ಮ ವೈವಾಹಿಕ ಜೀವನವನ್ನು ಇನ್ನಷ್ಟು ಸಂತೋಷಕರವಾಗಿರುಸ್ತದೆ.

ಮೇ ತಿಂಗಳ ಮಧ್ಯದಿಂದ ಅಕ್ಟೋಬರ್ ತಿಂಗಳ ವರೆಗಿನ ಸಮಯವು ವೈವಾಹಿಕ ಜೀವನದ ವಿಶೇಷ ಗಮನ ಹರಿಸುವ ಸಮಯ. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನವು ಒತ್ತಡದ ಪರಿಸ್ಥಿತಿಯಲ್ಲಿ ಉಳಿಯಬಹುದು. ಇದರೊಂದಿಗೆ ಮೇ ಮಧ್ಯದಿಂದ ಜೂನ್ ವರೆಗೆ, ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ನಿಮ್ಮ ವಿವಾಹದ ಮನೆಯ ಅಧಿಪತಿ ಮಂಗಳ ದೇವ ಈ ಸಮಯದಲ್ಲಿ ನಿಮ್ಮ ರಾಶಿಚಕ್ರದ ಹನ್ನೆರಡನೇ ಮನೆಗೆ ಗೋಚರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಪರಸ್ಪರರೊಂದಿಗೆ ಸಂಯಮದಿಂದ ಮಾತನಾಡಿದರೆ ಉತ್ತಮ. ಸೆಪ್ಟೆಂಬರ್ ನಂತರದ ಸಮಯ ಕೂಡ ಸಮಸ್ಯೆಗಳಿಂದ ತುಂಬಿರಬಹುದು. ಈ ಸಮಯದಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ವಿವಾದವಾಗಬಹುದು. ಜಗಳಗಳು ಮತ್ತು ಕ್ಲೇಶದ ಕಾರಣದಿಂದಾಗಿ ಸಂಬಂಧದಲ್ಲಿ ಒತ್ತಡ ಉಂಟಾಗಬಹುದು.

ಆದಾಗ್ಯೂ, ನಿಮ್ಮ ಮಕ್ಕಳ ಬಗ್ಗೆ ಮಾತನಾಡಿದರೆ, ಈ ವರ್ಷದ ಮೂರು ತಿಂಗಳು ಅಂದರೆ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳು ನಿಮ್ಮ ಮಕ್ಕಳಇಗೆ ಉತ್ತಮವಾಗಿರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಮಕ್ಕಳು ಪ್ರಗತಿ ಪಡೆಯಬಹುದು ಅಥವಾ ಮಕ್ಕಳ ಕಡೆಯಿಂದ ನೀವು ಯಾವುದೇ ಶುಭ ಸುದ್ಧಿಯನ್ನು ಪಡೆಯಬಹುದು.

ನಿಮ್ಮ ಜಾತಕದ ಆಧಾರದ ಮೇಲೆ ನಿಖರವಾದ ಶನಿ ರಿಪೋರ್ಟ್ ಅನ್ನು ಪಡೆಯಿರಿ

ವೃಷಭ ರಾಶಿ ಭವಿಷ್ಯ 2022 ರ ಪ್ರಕಾರ ಜ್ಯೋತಿಷ್ಯ ಪರಿಹಾರ :

  • ವೃಷಭ ರಾಶಿಚಕ್ರದ ಜನರು ತಮ್ಮ ಕುಲದೇವತೆಯನ್ನು ಪೂಜಿಸಬೇಕು.
  • ಶುಕ್ರವಾರ ನೀವು ಬಿಳಿ ವಸ್ತುಗಳ ದಾನ ಮಾಡುವುದು ಉತ್ತಮ.
  • ಹಿರಿಯರ ಸೇವೆ ಮಾಡಿ.
  • ನಿಯಮಿತವಾಗಿ ದುರ್ಗಾ ಚಾಲೀಸವನ್ನು ಪಠಿಸಿ.

ರತ್ನಗಳು, ಉಪಕರಣಗಳು ಸೇರಿದಂತೆ ಎಲ್ಲಾ ಜ್ಯೋತಿಷ್ಯ ಪರಿಹಾರಗಳಿಗಾಗಿ ಭೇಟಿ ನೀಡಿ: ಆಸ್ಟ್ರೋಸೇಜ್ ಆನ್‌ಲೈನ್ ಶಾಪಿಂಗ್ ಸ್ಟೋರ್

ನಮ್ಮ ಈ ಲೇಖನವು ನಿಮಗೆ ತುಂಬಾ ಸಹಾಯ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಹಾಗಿದ್ದಲ್ಲಿ, ಅದನ್ನು ನಿಮ್ಮ ಇತರ ಹಿತೈಷಿಗಳೊಂದಿಗೆ ಹಂಚಿಕೊಳ್ಳಿ. ಧನ್ಯವಾದಗಳು!

More from the section: Horoscope 3290
Buy Today
Gemstones
Get gemstones Best quality gemstones with assurance of AstroCAMP.com More
Yantras
Get yantras Take advantage of Yantra with assurance of AstroCAMP.com More
Navagrah Yantras
Get Navagrah Yantras Yantra to pacify planets and have a happy life .. get from AstroCAMP.com More
Rudraksha
Get rudraksha Best quality Rudraksh with assurance of AstroCAMP.com More
Today's Horoscope

Get your personalised horoscope based on your sign.

Select your Sign
Free Personalized Horoscope 2023
© Copyright 2024 AstroCAMP.com All Rights Reserved